alex Certify
ಕನ್ನಡ ದುನಿಯಾ       Mobile App
       

Kannada Duniya

1 ರೂ. ನಾಣ್ಯ ತಯಾರಿಕೆಗೆ ವೆಚ್ಚವಾಗುವುದೆಷ್ಟು ಗೊತ್ತಾ…?

ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ. ಚಲಾವಣೆಯಲ್ಲಿರುವ 1, 2, 5 ಹಾಗೂ 10 ರೂ. ನಾಣ್ಯ ತಯಾರಿಕೆಗೆ ವೆಚ್ಚವಾಗುತ್ತಿರುವ ಮಾಹಿತಿ ಇಲ್ಲಿದೆ.

ಖಾಸಗಿ ಮಾಧ್ಯಮವೊಂದು, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮಾಹಿತಿ ನೀಡಿದ್ದು, ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು 1.11 ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ.

ಅದೇ ರೀತಿ 2 ರೂ. ನಾಣ್ಯ ಟಂಕಿಸಲು 1.28 ರೂಪಾಯಿ, 5 ರೂ ನಾಣ್ಯಕ್ಕೆ 3.69 ರೂಪಾಯಿ ಹಾಗೂ 10 ರೂ. ನಾಣ್ಯಕ್ಕೆ 5.54 ರೂಪಾಯಿ ವೆಚ್ಚ ತಗಲುತ್ತದೆ ಎಂದು ಮಾಹಿತಿ ನೀಡಲಾಗಿದೆ. 2016-17 ಸಾಲಿನಲ್ಲಿ ಅತಿ ಹೆಚ್ಚು ಅಂದರೆ 220.1 ಕೋಟಿ ನಾಣ್ಯಗಳನ್ನು ಟಂಕಿಸಲಾಗಿದ್ದು, 2015-16 ನೇ ಸಾಲಿನಲ್ಲಿ 215.1 ಕೋಟಿ ನಾಣ್ಯಗಳನ್ನು ಟಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...