alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಲಸಾಧ್ಯ! 30 ರೂ.ಗೆ ಇಳಿಯಲಿದೆ ಪೆಟ್ರೋಲ್ ಬೆಲೆ

petro

ನವದೆಹಲಿ: ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಮುಂದಿನ 15 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಕಾರ್ ಗಳು ಮಾರಾಟವಾಗಲ್ಲ. 2030 ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಾನಿಕ್ ಕಾರ್ ಗಳ ಸಂಚಾರ ಹೆಚ್ಚಾಗಲಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು.

ಇದಕ್ಕೆ ಪೂರಕವಾದ ಮಾಹಿತಿಯೊಂದನ್ನು ಅಮೆರಿಕದ ಫ್ಯೂಚರಿಸ್ಟ್ ಟೋನಿ ಸೆಬಾ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಅದೇ ರೀತಿ ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 30 ರೂಪಾಯಿಗೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ಕಚ್ಚಾ ತೈಲ ಬ್ಯಾರಲ್ ಗೆ 25 ಡಾಲರ್ ಗೆ ಇಳಿಕೆಯಾಗಲಿದೆ. 2020 ರ ವೇಳೆಗೆ ತೈಲದ ಬೇಡಿಕೆ 100 ಮಿಲಿಯನ್ ಬ್ಯಾರಲ್ ಗಳಿಗೆ ಇಳಿಯಲಿದೆ. ನಂತರದ ವರ್ಷಗಳಲ್ಲಿ ಹಂತ ಹಂತವಾಗಿ 70 ಬ್ಯಾರಲ್ ಗಳಿಗೆ ಇಳಿಯಲಿದೆ.

ಸೌರಶಕ್ತಿ ಬಳಕೆ, ಎಲೆಕ್ಟ್ರಾನಿಕ್ ಕಾರ್ ಗಳ ಬಳಕೆ ಪ್ರಮಾಣ ಹೆಚ್ಚಾಗಲಿದೆ. ಹಳೆಯ ಕಾರ್ ಗಳಿದ್ದರೂ, ಎಲೆಕ್ಟ್ರಾನಿಕ್ ಕಾರ್ ಗಳ ಬಳಸುವವರ ಸಂಖ್ಯೆ ಏರಿಕೆಯಾಗಲಿದೆ. ಕಡಿಮೆ ಬೆಲೆಗೆ ಈ ವಾಹನಗಳು ಸಿಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಂತ್ರಜ್ಞಾನದಿಂದ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾದರೂ, ಆಟೋಮೊಬೈಲ್ ಉದ್ಯಮಕ್ಕೆ ಹಿನ್ನಡೆಯಾಗುತ್ತದೆ. ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚಿದಂತೆ ತೈಲೋದ್ಯಮದ ಮೇಲೆ ಪರಿಣಾಮ ಬೀರಲಿದ್ದು, ಅದು ನೆಲ ಕಚ್ಚುತ್ತದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...