alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ತಲೆಬಿಸಿ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಹೈರಾಣಾಗಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ತಲೆಬಿಸಿ ಕಾದಿದೆ. ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಕರೆ ದರಗಳು ಏರಿಕೆಯಾಗಲಿದೆ ಎನ್ನಲಾಗಿದೆ.

ಮೊಬೈಲ್ ಬಳಕೆ ಇನ್ಮುಂದೆ ದುಬಾರಿಯಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಮೊಬೈಲ್ ಬಿಲ್ ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ಎರಡು ತಿಂಗಳಲ್ಲಿ ಟೆಲಿಕಾಂ ಕಂಪನಿಗಳ ಸುಂಕದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಟೆಲಿಕಾಂ ಕ್ಷೇತ್ರದ ತಜ್ಞರು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮೊಬೈಲ್ ಬಳಕೆದಾರರಿಗೆ ಅಗ್ಗದ ಬೆಲೆಯಲ್ಲಿ ಸೇವೆ ಸಿಗ್ತಾಯಿತ್ತು. ಕಳೆದ ಎರಡು ತ್ರೈಮಾಸಿಕಗಳಿಂದ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮಾರುಕಟ್ಟೆಯಲ್ಲಿ ಗ್ರಾಹಕರ ಪ್ರತಿಕ್ರಿಯೆ ಗಮನಿಸಲು ಮುಂದಿನ ಎರಡು ತ್ರೈಮಾಸಿಕದಲ್ಲಿ ಟೆಲಿಕಾಂ ಕಂಪನಿಗಳು ಸುಂಕವನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಟೆಲಿಕಾಂ ಕ್ಷೇತ್ರದ ಈ ಬೆಳವಣಿಗೆಗೆ ರಿಲಯನ್ಸ್ ಜಿಯೋ ಕಾರಣ ಎನ್ನಲಾಗ್ತಿದೆ. ಮಾರುಕಟ್ಟೆ ಪ್ರವೇಶ ಮಾಡ್ತಿದ್ದಂತೆ ರಿಲಯನ್ಸ್ ಜಿಯೋ ಮೊದಲು ಉಚಿತವಾಗಿ ಸೇವೆ ನೀಡಿತ್ತು. ನಂತ್ರ ಅಗ್ಗದ ದರದಲ್ಲಿ ಸೇವೆ ನೀಡ್ತಿದೆ. ಇದೇ ಕಾರಣಕ್ಕೆ ಅನೇಕ ಗ್ರಾಹಕರು ಜಿಯೋ ಮೊರೆ ಹೋಗಿದ್ದಾರೆ.

ಆದ್ರೆ ಇದು ಉಳಿದ ಕಂಪನಿಗಳ ಮೇಲೆ ಹೊಡೆತ ನೀಡಿದೆ. ಹಳೆಯ ಹಾಗೂ ಚಿಕ್ಕ ಕಂಪನಿಗಳು ಬೆಲೆ ಸಮರಕ್ಕೆ ಸಮರ್ಥವಾಗಿಲ್ಲ. ಬೆಲೆ ಇಳಿಕೆ ನಷ್ಟಕ್ಕೆ ದಾರಿ ಮಾಡಿಕೊಡ್ತಿದೆ. ಹಾಗಾಗಿ ಕಂಪನಿಗಳ ನಡುವೆ ಒಪ್ಪಂದ ನಡೆದು ಎರಡು ಕಂಪನಿಗಳು ಒಂದಾಗ್ತಿವೆ. ಇದ್ರಿಂದ ಸುಂಕ ಹೆಚ್ಚಳ ಅನಿವಾರ್ಯವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...