alex Certify
ಕನ್ನಡ ದುನಿಯಾ       Mobile App
       

Kannada Duniya

ಓಲಾ-ಉಬರ್ ಕ್ಯಾಬ್ ಗ್ರಾಹಕರಿಗೆ ಖುಷಿ ಸುದ್ದಿ

ಓಲಾ-ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಖುಷಿ ಸುದ್ದಿ. ಕ್ಯಾಬ್ ಬಾಡಿಗೆ ಶೀಘ್ರವೇ ಕಡಿಮೆಯಾಗಲಿದೆ. ಓಲಾ-ಉಬರ್ ಅಪ್ಲಿಕೇಷನ್ ಬೇಸ್ ಫೇರ್ ಶೀಘ್ರದಲ್ಲೇ ಜಾರಿಗೆ ಬರಲಿದೆ. ಹೊಸ ಶುಲ್ಕ ಜುಲೈ 20 ರಿಂದ ಜಾರಿಗೆ ಬರಲಿದೆ. ವರದಿ ಪ್ರಕಾರ ನಿಯಮಿತ ಏರ್ ಕಂಡೀಷನರ್ ಟ್ಯಾಕ್ಸಿ ಶುಲ್ಕದ ಆಧಾರದ ಮೇಲೆ ಹೊಸ ಶುಲ್ಕವನ್ನು ನಿಗದಿಪಡಿಸಲಾಗುವುದು. ಹೊಸ ದರ 40 ರೂಪಾಯಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಗುರುವಾರವೇ ಕ್ಯಾಬ್ ನಿರ್ವಾಹಕರು ರಾಜ್ಯ ಸಾರಿಗೆ ಇಲಾಖೆಗೆ ಪತ್ರವನ್ನು ಕಳುಹಿಸಿದೆ. ನಂತ್ರ ನಿರ್ವಾಹಕರು ಮತ್ತು ಇಲಾಖೆ ಅಧಿಕಾರಿಗಳ ಮಧ್ಯೆ ಉನ್ನತ ಮಟ್ಟದ ಸಭೆ ನಡೆದಿದೆ. ಕ್ಯಾಬ್ ನಿರ್ವಾಹಕರ ವಿರುದ್ಧ ಗ್ರಾಹಕರಿಂದ ದೂರು ಕೇಳಿ ಬಂದಿತ್ತು. ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಅಧಿಕ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪವಿತ್ತು. ಇದಾದ ನಂತ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗ್ತಿದೆ.

ಸಾರಿಗೆ ಇಲಾಖೆ ಹಾಗೂ ಸರ್ಕಾರದ ಸೂಚನೆಗಳನ್ನು ನಾವು ಪಾಲನೆ ಮಾಡುತ್ತೇವೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ನಾವು ಸಿದ್ಧ ಎಂದು ಓಲಾ ವಕ್ತಾರರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...