alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲಿ ನೋಟು ಪಡೆದ ಗ್ರಾಹಕರಿಗೆ ಬಿಗ್ ಶಾಕ್…!

ಸಾಮಾನ್ಯವಾಗಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಕಲಿ ನೋಟು ಬರುವುದಿಲ್ಲ. ಹೀಗಿದ್ದರೂ ಒಮ್ಮೊಮ್ಮೆ ಬ್ಯಾಂಕ್, ಎ.ಟಿ.ಎಂ.ನಲ್ಲೇ ನಕಲಿ ನೋಟು ಗ್ರಾಹಕರ ಕೈ ಸೇರಿದ ಅನೇಕ ಘಟನೆ ನಡೆದಿವೆ.

ಬರೇಲಿಯಲ್ಲಿನ ಎ.ಟಿ.ಎಂ. ಒಂದರಲ್ಲಿ ಹಣ ಪಡೆದ ಗ್ರಾಹಕರು ಶಾಕ್ ಆಗಿದ್ದಾರೆ. ಬರೇಲಿ ಸುಭಾಷ್ ನಗರದಲ್ಲಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎ.ಟಿ.ಎಂ.ನಲ್ಲಿ 500 ರೂ. ನಕಲಿ ನೋಟುಗಳು ಕಂಡು ಬಂದಿವೆ.

ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಮನರಂಜನಾ ಬ್ಯಾಂಕ್ ಹೆಸರಿನ ನಕಲಿ ನೋಟು ಎ.ಟಿ.ಎಂ.ನಿಂದ ಬಂದಿವೆ.

ಈ ಎ.ಟಿ.ಎಂ.ನಲ್ಲಿ ಹಣ ಪಡೆದ ಮೂವರು ಸ್ಥಳೀಯ ಗ್ರಾಹಕರಿಗೆ ಚಿಲ್ಡ್ರನ್ ಬ್ಯಾಂಕ್ ನೋಟುಗಳು ಕೈ ಸೇರಿದ್ದು, ಬ್ಯಾಂಕಿನ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಪರಿಶೀಲನೆ ನಂತರವೇ ಬ್ಯಾಂಕ್ ಗಳಿಂದ ಹಣವನ್ನು ಎ.ಟಿ.ಎಂ.ಗೆ ತುಂಬಲಾಗುತ್ತದೆ. ಹೀಗಿದ್ದರೂ ಆಟಿಕೆ ನೋಟುಗಳು ಸೇರಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...