alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್, ಇಮೇಲ್ ಮೂಲಕವೇ ಬ್ಯಾಂಕ್ ಸಮನ್ಸ್

ನವದೆಹಲಿ: ತನ್ನ ಡಿಫಾಲ್ಟರ್ ಗ್ರಾಹಕರಿಗೆ ಸಮನ್ಸ್ ಗಳನ್ನು ಅಂಚೆ ಮೂಲಕ ನೀಡುವ ಸಾಂಪ್ರದಾಯಿಕ ಪದ್ಧತಿಗೆ ಬ್ಯಾಂಕುಗಳು ಗುಡ್ ಬೈ ಹೇಳಲು ಮುಂದಾಗಿವೆ.

ಅಂಚೆ ಬದಲಾಗಿ ಆಧುನಿಕ ಡಿಜಿಟಲ್ ಮಾಧ್ಯಮವಾದ ಇಮೇಲ್, ವಾಟ್ಸಾಪ್ ಮೂಲಕ‌ ಸಮನ್ಸ್ ಕಳಿಸುವ ವ್ಯವಸ್ಥೆಯನ್ನು ಹಂತಹಂತವಾಗಿ ಜಾರಿಗೊಳಿಸಲಾರಂಭಿಸಿವೆ.

ಅಂಚೆ ಮೂಲಕ ಸಮನ್ಸ್ ಕಳಿಸಿದರೆ ಅನೇಕ ಸಂದರ್ಭಗಳಲ್ಲಿ ತಡವಾಗುತ್ತದೆ. ಗ್ರಾಹಕರ ವಿಳಾಸ ಬದಲಾಗಿದ್ದರೆ ಸಮನ್ಸ್ ತಲುಪುವುದೇ ಇಲ್ಲ. ಈ ಕಾರಣಕ್ಕೆ ವಾಟ್ಸಾಪ್, ಇ ಮೇಲ್ ಮೂಲಕ ನೇರವಾಗಿ ವಿಷಯ ತಲುಪಿಸಲಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಕಳೆದ ಎರಡು ತಿಂಗಳಲ್ಲಿ 214 ಕೋರ್ಟ್ ಸಮನ್ಸ್ ಗಳನ್ನು ಅಂಚೆ ಬದಲು ಇಮೇಲ್, ವಾಟ್ಸಾಪ್ ಮೂಲಕ ಕಳಿಸಿದೆ. ಇವುಗಳಲ್ಲಿ ಬಹುತೇಕ ಚೆಕ್ ಬೌನ್ಸ್ ಪ್ರಕರಣಗಳಾಗಿದ್ದವು.

ಸುಸ್ತಿಯಾದ‌ ಗ್ರಾಹಕರು ನೋಟಿಸ್ ಸ್ವೀಕರಿಸಲು ತಡ ಮಾಡುವುದರಿಂದ ಹಲವಾರು ಪ್ರಕರಣ ಬಗೆಹರಿಯುವುದೂ ಕೂಡ ತಡವಾಗುತ್ತದೆ. ಡಿಜಿಟಲ್ ಮಾಧ್ಯಮದಲ್ಲಿ ಕಳಿಸಿದರೆ ಈ ಸಮಯ ತಡವಾಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...