alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಡ್ ನ್ಯೂಸ್: ಶೀಘ್ರವೇ ದುಬಾರಿಯಾಗಲಿದೆ ಎಟಿಎಂ ಬಳಕೆ

ಎಟಿಎಂ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್. ಶೀಘ್ರವೇ ಎಟಿಎಂ ಬಳಕೆ ದುಬಾರಿಯಾಗಲಿದೆ. ಎಟಿಎಂ ವಹಿವಾಟು ಶುಲ್ಕವನ್ನು ಏರಿಸುವಂತೆ ಬ್ಯಾಂಕ್ ಗಳು ಆರ್ ಬಿ ಐ ಗೆ ಮನವಿ ಸಲ್ಲಿಸಿವೆ. ಎಟಿಎಂ ಉನ್ನತೀಕರಣದಿಂದ ಆರ್ಥಿಕ ಹೊರೆ ಹೆಚ್ಚಾಗಿರುವ ಕಾರಣ ಬ್ಯಾಂಕ್ ಗಳು ಈ ನಿರ್ಧಾರ ಕೈಗೊಂಡಿವೆ.

ಆರ್ ಬಿ ಐ ಎಲ್ಲ ಬ್ಯಾಂಕುಗಳಿಗೆ ಎಟಿಎಂ ಉನ್ನತೀಕರಣಕ್ಕೆ ಸೂಚನೆ ನೀಡಿದೆ. ಎಟಿಎಂ ಉನ್ನತೀಕರಣದಿಂದ ಬ್ಯಾಂಕ್ ಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದೆ. ಇದನ್ನು ಗ್ರಾಹಕರ ಮೇಲೆ ಹಾಕಲು ಬ್ಯಾಂಕ್ ಗಳು ಮುಂದಾಗಿವೆ. ಬ್ಯಾಂಕ್ ಗಳ ಬೇಡಿಕೆಗೆ ಆರ್ ಬಿ ಐ ಈವರೆಗೂ ಒಪ್ಪಿಗೆ ನೀಡಿಲ್ಲ. ಶೀಘ್ರವೇ ಇದಕ್ಕೆ ಅಸ್ತು ಎನ್ನುವ ಸಾಧ್ಯತೆ ಹೆಚ್ಚಿದೆ.

ಎಟಿಎಂ ವಹಿವಾಟು ಶುಲ್ಕವನ್ನು ಎರಡು ರೀತಿಯಲ್ಲಿ ಏರಿಸುವ ಸಾಧ್ಯತೆಯಿದೆ. ಉಚಿತ ವಹಿವಾಟು ಪ್ರಕ್ರಿಯೆ ಮುಗಿದ ನಂತ್ರ ವಿಧಿಸುತ್ತಿದ್ದ 18 ರೂಪಾಯಿ ಶುಲ್ಕವನ್ನು 23 ರೂಪಾಯಿಗೆ ಏರಿಸುವ ಸಾಧ್ಯತೆಯಿದೆ. ಇದ್ರ ಜೊತೆಗೆ ಎಟಿಎಂ ಉಚಿತ ವಹಿವಾಟು ಸಂಖ್ಯೆಯನ್ನೂ ಇಳಿಕೆ ಮಾಡುವ ಸಾಧ್ಯತೆಯಿದೆ. ಖಾಸಗಿ ಬ್ಯಾಂಕುಗಳು ಎಟಿಎಂ ನ ಮೂರು ವಹಿವಾಟನ್ನು ಉಚಿತವಾಗಿ ನೀಡುತ್ತವೆ. ಕೆಲ ಎಟಿಎಂ ಗಳು 5 ವಹಿವಾಟಿನವರೆಗೆ ಯಾವುದೇ ಹಣ ವಸೂಲಿ ಮಾಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...