alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನಲ್ಲಿ ಸಿಗಲ್ಲ 500 ರೂ. ಹೊಸ ನೋಟು

dh-23_lfuvv1j

ನೋಟು ನಿಷೇಧವಾಗಿ ಎರಡು ತಿಂಗಳಾಗ್ತಾ ಬಂತು. ಈವರೆಗೂ ಅನೇಕರು 500 ರೂಪಾಯಿ ಹೊಸ ನೋಟನ್ನು ನೋಡಿಲ್ಲ. ಎಲ್ಲ ಎಟಿಎಂಗಳಲ್ಲಿ 500 ರೂಪಾಯಿ ನೋಟು ಸಿಗ್ತಾ ಇಲ್ಲ. ಬ್ಯಾಂಕ್ ನಲ್ಲಿ ಮಾತ್ರ 500 ರೂಪಾಯಿ ನೋಟು ಸಿಗ್ತಾ ಇತ್ತು. ಆದ್ರೀಗ ಆರ್ ಬಿ ಐ 500 ರೂಪಾಯಿ ನೋಟುಗಳನ್ನು ನೀಡದಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

2 ಸಾವಿರ ರೂಪಾಯಿಗೆ ಚಿಲ್ಲರೆ ಇಲ್ಲ ಎಂದು ಜನಸಾಮಾನ್ಯರು ಪರದಾಡ್ತಾ ಇದ್ದಾರೆ. ಈ ವೇಳೆ ಬ್ಯಾಂಕ್ ನಲ್ಲಿಯೂ 500 ರೂಪಾಯಿ ಸಿಗಲ್ಲ ಎಂದ್ರೆ ಹೇಗೆ ಎಂದು ಕೇಳಬೇಡಿ. ದೊಡ್ಡ ಮೊತ್ತದ ಹಣ ಡ್ರಾ ಮಾಡುವವರಿಗೆ ಬ್ಯಾಂಕ್ ಕೇವಲ 2 ಸಾವಿರ ರೂಪಾಯಿ ನೋಟುಗಳನ್ನು ಮಾತ್ರ ನೀಡಲಿದೆ. 500 ರೂಪಾಯಿ ಇನ್ಮುಂದೆ ಎಟಿಎಂನಲ್ಲಿ ಸಿಗಲಿದೆ.

ಬ್ಯಾಂಕ್ ನಿಂದ ದೊಡ್ಡ ಪ್ರಮಾಣದಲ್ಲಿ ಹಣ ಡ್ರಾ ಮಾಡಿದ ಗ್ರಾಹಕರು 500 ರೂಪಾಯಿ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡ್ತಾ ಇಲ್ಲ. ಇದರಿಂದಾಗಿ ಚಿಲ್ಲರೆ ಸಮಸ್ಯೆ ಎದುರಾಗ್ತಾ ಇದೆ. ಇದನ್ನು ತಪ್ಪಿಸಲು ಮುಂದಾಗಿರುವ ಆರ್ ಬಿ ಐ, ಎಟಿಎಂನಲ್ಲಿ 500 ರ ನೋಟು ಸಿಗುವಂತೆ ಮಾಡಿದೆ. ಎಲ್ಲ ಬ್ಯಾಂಕ್ ಗಳಿಗೂ ಈ ಬಗ್ಗೆ ಸೂಚನೆ ನೀಡಿದೆ. ಡಿಸೆಂಬರ್ 30 ರಂದು ಮುದ್ರಣವಾಗಿ ಬಂದ 500 ರೂಪಾಯಿ ನೋಟಿನಲ್ಲಿ ಶೇಕಡಾ 75 ರಷ್ಟು ಹಣ ಎಟಿಎಂ ಸೇರಲಿದೆ. ಈ ಎಲ್ಲ ವ್ಯವಸ್ಥೆ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ಮೇಲ್ವಿಚಾರಣೆ ನಡೆಸಲಿವೆ. ಒಂದು ವೇಳೆ ಬ್ಯಾಂಕ್ ದಾರಿ ತಪ್ಪಿದ್ದು ಗೊತ್ತಾದಲ್ಲಿ ಬ್ಯಾಂಕ್ ಸಿಬ್ಬಂದಿ ಸಮೇತ ಮ್ಯಾನೇಜರ್ ವಿಚಾರಣೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...