alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಬ್ಯಾಂಕ್ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಉಳಿತಾಯ ಖಾತೆಯ ಕನಿಷ್ಠ ಮೊತ್ತದ ಮೇಲೆ ವಿಧಿಸುತ್ತಿದ್ದ ಚಾರ್ಜ್ ನ್ನು ಅನೇಕ ಬ್ಯಾಂಕ್ ಗಳು ತೆಗೆದು ಹಾಕ್ತಿವೆ. ಆದ್ರೆ ಉಳಿದ ಸೇವೆಗಳಿಗೆ ಹಣ ವಸೂಲಿ ಮಾಡುವ ಯೋಜನೆ ರೂಪಿಸಿವೆ. ಬಹುತೇಕ ಬ್ಯಾಂಕ್ ಗಳು ಜನವರಿ 20ರಿಂದ ಬ್ಯಾಂಕಿಂಗ್ ಸೇವೆಯನ್ನು ದುಬಾರಿಗೊಳಿಸಲಿವೆ. ಇದ್ರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಬ್ಯಾಂಕ್ ಗೆ ಹಣ ಜಮಾ ಮಾಡಲು ಹಾಗೂ ಹಣ ಡ್ರಾ ಮಾಡಲು ಇನ್ಮುಂದೆ ಚಾರ್ಜ್ ನೀಡಬೇಕಾಗುತ್ತದೆ. ಈ ಮೊತ್ತವನ್ನು ನಿಮ್ಮ ಅಕೌಂಟ್ ನಿಂದ ನೇರವಾಗಿ ಬ್ಯಾಂಕ್ ಗಳು ಪಡೆಯಲಿವೆ.

ಇಷ್ಟೇ ಅಲ್ಲ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳಲೂ ನೀವು ಬ್ಯಾಂಕ್ ಗೆ ಚಾರ್ಜ್ ನೀಡಬೇಕಾಗುತ್ತದೆ. ಈ ಯೋಜನೆ ಕೂಡ ಜನವರಿ 20ರಿಂದ ಜಾರಿಗೆ ಬರಲಿದೆ.

ಬ್ಯಾಂಕ್ ಖಾತೆಗೆ ನೀಡಿರುವ ಮೊಬೈಲ್ ನಂಬರ್ ಬದಲಾಯಿಸಲು. ಕೆವೈಸಿ ಬದಲಾಯಿಸಲು ಹಾಗೂ ನೆಟ್ ಬ್ಯಾಂಕಿಂಗ್ ಗೆ ಕೂಡ ನೀವು ಹಣ ನೀಡಬೇಕಾಗುತ್ತದೆ. ಜನವರಿ 20ರ ನಂತ್ರ ಉಳಿತಾಯ ಖಾತೆಯಿಂದ 50 ಸಾವಿರ ರೂಪಾಯಿಯೊಳಗೆ ಹಣ ಡ್ರಾ ಮಾಡುವುದಾದಲ್ಲಿ ಬ್ಯಾಂಕ್ ಗೆ 10 ರೂಪಾಯಿ ನೀಡಬೇಕಾಗುತ್ತದೆ. ಚೆಕ್ ಕ್ಲಿಯರ್ ಮಾಡಲೂ 10 ರೂಪಾಯಿ ನೀಡಬೇಕು. ಒಂದೇ ದಿನ ಒಂದಕ್ಕಿಂತ ಹೆಚ್ಚು ವ್ಯವಹಾರಕ್ಕೂ 10 ರೂಪಾಯಿ ಖರ್ಚಾಗುತ್ತದೆ.

ಸಹಿ ಹಾಗೂ ಫೋಟೋ ಪರಿಶೀಲನೆಗೆ 50 ರೂಪಾಯಿ ನೀಡಬೇಕಾಗುತ್ತದೆ. ಮೊಬೈಲ್ ನಂಬರ್ ಬದಲಾವಣೆಗೆ 25 ರೂಪಾಯಿ ಹಾಗೂ ಪಾಸ್ ಬುಕ್ ಗಾಗಿ 50 ರೂಪಾಯಿ ನೀಡಬೇಕು. ನೆಟ್ ಬ್ಯಾಂಕಿಂಗ್ ಗೆ 25 ರೂಪಾಯಿ ಹಾಗೂ ಪಿನ್ ಬದಲಾವಣೆಗೆ 10 ರೂಪಾಯಿ ಕತ್ತರಿ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...