alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮುಷ್ಕರದಿಂದ ನಷ್ಟವಾಗಿದ್ದೆಷ್ಟು ಗೊತ್ತಾ..?

sbi-str

ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಫೆಬ್ರವರಿ 28 ರಂದು ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರಿಂದ ಭಾರಿ ನಷ್ಟವಾಗಿದೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ನೀಡಿರುವ ಮಾಹಿತಿಯಂತೆ, ಅಂದಾಜು 1.3 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.

ಮುಷ್ಕರದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿತ್ತು. ಸುಮಾರು 1,600 ಕೋಟಿ ರೂಪಾಯಿ ಸಾಲ ವಿತರಣೆಗೆ ಅಡ್ಡಿಯಾಗಿದೆ. ಇದರೊಂದಿಗೆ ವಿದೇಶಿ ವಿನಿಮಯ, ಚೆಕ್ ಕ್ಲಿಯರೆನ್ಸ್ ಮೇಲೆಯೂ ಪರಿಣಾಮ ಉಂಟಾಗಿದೆ. ಆಮದು, ರಫ್ತು ವಹಿವಾಟಿಗೂ ತೊಂದರೆಯಾಗಿತ್ತು.

ಇವೇ ಮೊದಲಾದ ವಹಿವಾಟಿನ ಹಿನ್ನಡೆಯಿಂದ ಸುಮಾರು 1.3 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...