alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಬಂದ್ ಆಗ್ತಿದೆ ಎಸ್.ಬಿ.ಐ. ಡೆಬಿಟ್ ಕಾರ್ಡ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಬ್ಯಾಂಕ್ ಆಯಸ್ಕಾಂತೀಯ ಡೆಬಿಟ್ ಕಾರ್ಡ್ ರದ್ದು ಮಾಡಲಿದೆಯಂತೆ. ಇದ್ರ ಬದಲು ಗ್ರಾಹಕರಿಗೆ ಇಎಂವಿ ಚಿಪ್ ನ ಡೆಬಿಟ್ ಕಾರ್ಡ್ ನೀಡಲಿದೆ.

ಹೊಸ ಡೆಬಿಟ್ ಕಾರ್ಡ್ ಪಡೆಯಲು ಗ್ರಾಹಕರಿಗೆ ಡಿಸೆಂಬರ್ 31,2018 ರವರೆಗೆ ಅವಕಾಶವಿದೆ. ಅವಧಿ ನಂತ್ರ ಹಳೆ ಕಾರ್ಡ್ ನಿಷ್ಪ್ರಯೋಜಕವಾಗಲಿದೆ. ಬ್ಯಾಂಕಿನ ಎಟಿಎಂ ಮಷಿನ್ ಗಳು ನಿಮ್ಮ ಕಾರ್ಡ್ ನ್ನು ಸ್ವೀಕರಿಸುವುದಿಲ್ಲ. ಹೊಸ ಡೆಬಿಟ್ ಕಾರ್ಡ್ ಪಡೆಯಲು ಗ್ರಾಹಕರು ಬ್ಯಾಂಕ್ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಬ್ಯಾಂಕಿನ ಶಾಖೆಗೆ ಹೋಗಿ ಕೂಡ ನೀವು ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ಫೆಬ್ರವರಿ 2017 ರಿಂದಲೇ ಆಯಸ್ಕಾಂತೀಯ ಕಾರ್ಡ್ ನೀಡುವುದನ್ನು ರದ್ದು ಮಾಡಿದೆ.ಡಿಸೆಂಬರ್ 31,2018 ರೊಳಗೆ ಇಎಂವಿ ಚಿಪ್ ಹೊಂದಿರುವ ಕಾರ್ಡ್ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಆಯಸ್ಕಾಂತೀಯ ಕಾರ್ಡ್ ಈಗ ಹಳೆ ತಂತ್ರಜ್ಞಾನ. ಕಾರ್ಡ್ ತಯಾರಿ ಸಂಪೂರ್ಣ ಬಂದ್ ಆಗಿದೆ. ಹಾಗೆ ಈ ಕಾರ್ಡ್ ಸುರಕ್ಷಿತವಲ್ಲ ಎಂಬುದು ಬ್ಯಾಂಕ್ ಹೇಳಿಕೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...