alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್ : ಬಾಗಿಲು ಮುಚ್ಚಲಿವೆ ಈ ಬ್ಯಾಂಕಿನ 700 ಎಟಿಎಂ

ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್. ಈ ತಿಂಗಳ ಅಂತ್ಯದೊಳಗೆ ಬ್ಯಾಂಕ್ ನ 700 ಎಟಿಎಂಗಳು ಬಾಗಿಲು ಮುಚ್ಚಲಿವೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಇಂಡಿಯಾ ವೆಚ್ಚ ಕಡಿಮೆ ಮಾಡಲು ಈ ಕೆಲಸಕ್ಕೆ ಕೈ ಹಾಕಿದೆ.

ಮುಂದಿನ ದಿನಗಳಲ್ಲಿ ಮತ್ತೆ 300 ಎಟಿಎಂ ಮುಚ್ಚುವ ಸಾಧ್ಯತೆಯಿದೆ. ಬ್ಯಾಂಕ್ ನ ಎನ್ ಪಿಎ ಹೆಚ್ಚಾಗಿರುವುದ್ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಿಡಿತವನ್ನು ಬಿಗಿ ಮಾಡ್ತಿದೆ. ಹಾಗಾಗಿ ಬ್ಯಾಂಕ್ ಎಟಿಎಂ ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಎಟಿಎಂ ಮುಚ್ಚುವ ಮೊದಲು ಗ್ರಾಹಕರ ಅವಶ್ಯಕತೆ ಬಗ್ಗೆ ಬ್ಯಾಂಕ್ ಗಮನ ನೀಡಲಿದೆ. 2017 ಏಪ್ರಿಲ್ ನಲ್ಲಿಯೇ ಬ್ಯಾಂಕ್ 90 ಎಟಿಎಂ ಮಷಿನ್ ಗಳ ಕೆಲಸ ನಿಲ್ಲಿಸಿತ್ತು. ಎಟಿಎಂ ಮುಚ್ಚುವ ಮುನ್ನ ಸ್ಥಳೀಯ ಗ್ರಾಹಕರಿಗೆ ಈ ಬಗ್ಗೆ ಬ್ಯಾಂಕ್ ಮಾಹಿತಿ ರವಾನೆ ಮಾಡಲಿದೆ. ಏರುತ್ತಿರುವ ನಷ್ಟದಿಂದ ಚಿಂತೆಗೊಳಗಾಗಿರುವ ಬ್ಯಾಂಕ್ 9 ವಿದೇಶಿ ಶಾಖೆ ಹಾಗೂ ಪ್ರತಿನಿಧಿ ಕಚೇರಿಯನ್ನು ಮುಚ್ಚಲು ಮುಂದಾಗಿದೆ. ಜೊತೆಗೆ ಕೆಲವೊಂದು ಸೌಲಭ್ಯಗಳನ್ನು ಕಡಿತಗೊಳಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...