alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನಿರದು ವಿಜಯಾ ಬ್ಯಾಂಕ್ ಹೆಸರು…!

ನವದೆಹಲಿ: ಕರ್ನಾಟಕದ ಮಂಗಳೂರಿನಲ್ಲಿ 1931ರಲ್ಲಿ ಎ.ಬಿ. ಶೆಟ್ಟಿ ಮತ್ತಿತರು ಆರಂಭಿಸಿ ರಾಷ್ಟ್ರಮಟ್ಟಕ್ಕೆ ಬೆಳೆಸಿದ ವಿಜಯ ಬ್ಯಾಂಕ್ ಇನ್ನು ಮುಂದೆ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಸೇರಿಕೊಳ್ಳುವ ಕಾರಣ, ವಿಜಯ ಬ್ಯಾಂಕ್ ಎಂಬ ಹೆಸರು ಇತಿಹಾಸದ ಪುಟಕ್ಕೆ ಸೇರುವ ಕಾಲ ಸಮೀಪಿಸಿದೆ.

ಮೊದಲ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಸ್.ಬಿ.ಐ. ಜತೆ ವಿಲೀನಗೊಂಡಿತು. ಎರಡನೇ ಹಂತದ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ವಿಲೀನಗೊಳ್ಳಲಿದೆ.

ಕೇಂದ್ರ ಸರ್ಕಾರ ಈ ಮೂರು ಬ್ಯಾಂಕ್ ವಿಲೀನಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದು, ಶೀಘ್ರವೇ ಮೂರು ಬ್ಯಾಂಕ್‌ಗಳ ಬೋರ್ಡ್ ಮೀಟಿಂಗ್ ನಡೆದು ಅಂತಿಮ ತೀರ್ಮಾನ ಹೊರಬೀಳಲಿದೆ. ಈ ಮೂರು ಬ್ಯಾಂಕ್ ಗಳು ಸೇರುವುದರಿಂದ ದೇಶದಲ್ಲಿ ಬಲಿಷ್ಠ ಬ್ಯಾಂಕಿಂಗ್ ಅಸ್ತಿತ್ವವೊಂದು ಕಾಣಿಸಿಕೊಂಡಂತಾಗುತ್ತದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಈ ಪ್ರಸ್ತಾವನೆಯನ್ನು ನೀಡಿದೆ. ಮೂರು ಬ್ಯಾಂಕ್‌ಗಳ ಬೋರ್ಡ್ ಮೀಟಿಂಗ್ ನಡೆದು ತೀರ್ಮಾನ ಮಾಡುತ್ತವೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...