alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನಲ್ಲಿ ಹಣವಿಡುವ ಬಗ್ಗೆ ಆರ್ಥಿಕ ತಜ್ಞರು ಏನೇಳ್ತಾರೆ…?

ಶ್ರೀಸಾಮಾನ್ಯ ತನ್ನ ಸಂಬಳ ಹಾಗೂ ಉಳಿತಾಯದ ಹಣವನ್ನು ಸಾಮಾನ್ಯವಾಗಿ ಬ್ಯಾಂಕ್ ಖಾತೆಯಲ್ಲಿಡ್ತಾನೆ. ಇದಕ್ಕೆ ಬ್ಯಾಂಕ್ ಬಡ್ಡಿ ನೀಡುವುದರಿಂದ ಬ್ಯಾಂಕ್ ನಲ್ಲಿರುವ ನನ್ನ ಹಣ ಹೆಚ್ಚಾಗ್ತಿದೆ ಎಂದು ಶ್ರೀಸಾಮಾನ್ಯ ಭಾವಿಸ್ತಾನೆ. ಆದ್ರೆ ಆರ್ಥಿಕ ತಜ್ಞರು ಬೇರೆಯದನ್ನೇ ಹೇಳ್ತಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ ಹಣ ಇಡುವುದರಿಂದ ಬರುವ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುತ್ತಾರೆ ಆರ್ಥಿಕ ತಜ್ಞರು. ಗ್ರಾಹಕನ ಹಣವನ್ನು ಸೇವಿಂಗ್ ಖಾತೆಯಲ್ಲಿಡುವುದರಿಂದ ಬ್ಯಾಂಕ್ ಕಡಿಮೆ ಬಡ್ಡಿ ನೀಡುತ್ತದೆ. ಈ ಹಣವನ್ನು ಬ್ಯಾಂಕ್ ನಲ್ಲಿಡುವ ಬದಲು ಹೊರಗಿನ ಕಾರ್ಯಗಳಿಗೆ ವಿನಿಯೋಗಿಸಿದ್ರೆ ಲಾಭ ಜಾಸ್ತಿ ಎನ್ನುತ್ತಾರೆ ತಜ್ಞರು.

ಸ್ವಲ್ಪ ಹಣವನ್ನು ಬ್ಯಾಂಕ್ ನಲ್ಲಿಟ್ಟು ಉಳಿದ ಹಣವನ್ನು ಮಾರುಕಟ್ಟೆಯಲ್ಲಿ ಬರ್ತಾ ಇರುವ ಹೊಸ ಹೊಸ ಯೋಜನೆಗಳಿಗೆ ಹೂಡಿಕೆಯಾಗಿ ವಿನಿಯೋಗಿಸಬಹುದಾಗಿದೆ. ಈಗ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಉತ್ತಮ ಲಾಭ ಸಿಗ್ತಾ ಇದೆ. ಸ್ವಲ್ಪ ಹಣದಲ್ಲಿ ಹೆಚ್ಚು ಲಾಭ ಗಳಿಸುವ ಆಸಕ್ತಿ ನಿಮಗೂ ಇದ್ದಲ್ಲಿ ಆರ್ಥಿಕ ತಜ್ಞರ ಸಲಹೆ ಪಡೆದು ಹೆಚ್ಚು ರಿಟರ್ನ್ಸ್ ಬರುವ ಯೋಜನೆಗಳ ಮೇಲೆ ಹಣ ಹೂಡಿ ಎಂಬುದು ತಜ್ಞರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...