alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲಗಾರ ರೈತರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ರೈತರ ರಕ್ಷಣೆಗೆ ಧಾವಿಸಿರುವ ಸುಪ್ರೀಂ ಕೋರ್ಟ್, ಸಾಲಗಾರ ರೈತರು ಬಡ್ಡಿ ಕಡಿತಕ್ಕೆ ಮನವಿ ಮಾಡಬಹುದಾಗಿದೆ ಎಂದು ಹೇಳಿದೆ.

ಪ್ರಕೃತಿ ವಿಕೋಪದ ಕಾರಣ ಬೆಳೆ ವೈಫಲ್ಯದಿಂದ ಸಾಲ ಮರುಪಾವತಿಸಲು ಸಾಧ್ಯವಾಗದಿದ್ದಲ್ಲಿ ತಾವು ಪಡೆದುಕೊಂಡ ಕೃಷಿ ಸಾಲದ ಬಡ್ಡಿಯನ್ನು ಕಡಿತ ಮಾಡುವಂತೆ ಕೋರ್ಟ್ ಗೆ ಮನವಿ ಮಾಡಬಹುದಾಗಿದೆ. ರೈತರು ಈ ಸೌಲಭ್ಯವನ್ನು ಪಡೆಯಲು ಸ್ಥಳೀಯ ಸಾಲ ಪರಿಹಾರ ಕಾನೂನು ಇರಬೇಕು ಎಂದು ಕೋರ್ಟ್ ಹೇಳಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯು, ಸಾಲ ಪರಿಹಾರ ಕಾಯ್ದೆ ಜಾರಿಯಲ್ಲಿರುವ ರಾಜ್ಯಗಳ ಕೃಷಿ ಸಾಲಗಳಿಗೆ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಇರುವ ಷರತ್ತುಗಳನ್ನು ಪುನರ್ ಪರಿಶೀಲಿಸದಂತೆ ನ್ಯಾಯಾಲಯಗಳನ್ನು ನಿರ್ಬಂಧಿಸುತ್ತದೆ.

ಬೆಳೆ ವೈಫಲ್ಯದಿಂದಾಗಿ ಬ್ಯಾಂಕ್ ಗಳಿಗೆ ಸಾಲ ತೀರಿಸಲಾಗದೇ ದೇಶದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅನೇಕ ರಾಜ್ಯಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ. ಕೃಷಿಯಲ್ಲಿ ಬೆಳೆ ವೈಫಲ್ಯದಿಂದ ಸಾಲ ಪಾವತಿಸಲು ಕಷ್ಟವಾದ ರೈತರು ಬಡ್ಡಿ ಕಡಿತ ಮಾಡಲು ಮನವಿ ಮಾಡಬಹುದಾಗಿದೆ ಎಂದು ಕೋರ್ಟ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...