alex Certify ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್​ ನ್ಯೂಸ್​: ಮುಂದಿನ ಮೂರು ವರ್ಷಗಳಲ್ಲಿ ಈ ವಲಯದಲ್ಲಾಗಲಿದೆ 70 ಸಾವಿರಕ್ಕೂ ಅಧಿಕ ನೇಮಕಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್​ ನ್ಯೂಸ್​: ಮುಂದಿನ ಮೂರು ವರ್ಷಗಳಲ್ಲಿ ಈ ವಲಯದಲ್ಲಾಗಲಿದೆ 70 ಸಾವಿರಕ್ಕೂ ಅಧಿಕ ನೇಮಕಾತಿ

ಮಾಹಿತಿ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವಾರು ಬ್ಯಾಂಕಿಂಗ್​ ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳು ಮುಂದಿನ ಕೆಲ ವರ್ಷಗಳಲ್ಲಿ ಉದ್ಯೋಗ ನೇಮಕಾತಿಗೆ ವೇಗವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಟೀಮ್​​ಲೀಸ್​ ಸರ್ವೀಸಸ್​ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಎನ್ಬಿಎಫ್​ಸಿ ಹಾಗೂ ಖಾಸಗಿ ಬ್ಯಾಂಕುಗಳು 70 ಸಾವಿರ ಫ್ರೆಶರ್​ಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಬ್ಯಾಂಕಿಂಗ್, ಹಣಕಾಸು ಸೇವೆ ಹಾಗೂ ವಿಮಾ ವಲಯಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಸುಮಾರು 25 ಪ್ರತಿಶತ ಎಂಟ್ರಿ ಲೆವಲ್​​ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಟೆಕ್​ ವಲಯಗಳಲ್ಲಿ ಹೆಚ್ಚುತ್ತಿರುವ ಸಂಬಳ ಹಾಗೂ ರಿಯಲ್​ ಎಸ್ಟೇಟ್​​ ವಲಯದಲ್ಲಿ ಕಾಣುತ್ತಿರುವ ಚೇತರಿಕೆಯು ಬಿಎಫ್​ಎಸ್ಐ ಮೇಲಿನ ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬ ನಿರೀಕ್ಷೆಯಿದೆ ಎಂದು ಟೀಂಲೀಸ್​​ ಸರ್ವೀಸಸ್​ ಮುಖ್ಯಸ್ಥ ಅಮಿತ್​​​ ವಡೇರಾ ಹೇಳಿದ್ದಾರೆ.

ಈ ಬೆಳವಣಿಗೆಯು ಬಿಎಫ್​ಎಸ್ಐ ವಲಯದ ಮೇಲೆ ಪರಿಣಾಮ ಬೀರಲಿದ್ದು, ಇದರಿಂದಾಗಿ ಫ್ರೆಶರ್​ಗಳನ್ನು ಹೆಚ್ಚೆಚ್ಚು ನೇಮಕ ಮಾಡಿಕೊಳ್ಳಲಾಗುತ್ತೆ ಎಂದು ವಡೇರಾ ಹೇಳಿದ್ದಾರೆ.

ಕಳೆದ ಆರು ತಿಂಗಳಲ್ಲಿ ಬಿಎಫ್​ಎಸ್​ಐ ನೇಮಕಾತಿ ವಲಯದಲ್ಲಿ 25 ಪ್ರತಿಶತ ಏರಿಕೆ ಕಂಡಿದೆ ಹಾಗೂ ಕಂಪನಿಗಳು ಫ್ರೆಶರ್​ಗಳ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಹೆಚ್ಚಿನ ಹೂಡಿಕೆ ಮಾಡುತ್ತಿವೆ ಎನ್ನಲಾಗಿದೆ.

ಭಾರತದ ಅತೀದೊಡ್ಡ ಖಾಸಗಿ ಸಾಲದಾತ ಹೆಚ್​ಡಿಎಫ್​ಸಿ ಬ್ಯಾಂಕ್​ ಮುಂದಿನ ಆರು ತಿಂಗಳಲ್ಲಿ 2500 ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಯೋಜನೆಯಲ್ಲಿದೆ. ಮುಂದಿನ 2 ವರ್ಷಗಳಲ್ಲಿ 2 ಲಕ್ಷ ಗ್ರಾಮಗಳನ್ನು ತಲುಪುವ ಪ್ಲಾನ್​ ಹೆಚ್​ಡಿಎಫ್​ಸಿಯದ್ದಾಗಿದೆ.

ಅದೇ ರೀತಿ ಐಸಿಐಸಿಐ ಹೋಂ ಫೈನಾನ್ಸ್​​ 600 ಮಂದಿಯನ್ನು ನೇಮಿಸಿಕೊಳ್ಳುವ ಪ್ಲಾನ್​ನಲ್ಲಿದ್ದರೆ ಕೋಟಕ್​ ಮಹೀಂದ್ರಾ ಕೂಡ ಇದೇ ರೀತಿಯ ಯೋಜನೆಯನ್ನು ಹಾಕಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...