alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಡಿ., ಎಫ್.ಡಿ. ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್

ಮುಂಬೈ: ಬ್ಯಾಂಕ್ ಠೇವಣಿಗಳ ಬೆಳವಣಿಗೆ ಕಳೆದ 5 ದಶಕದಲ್ಲಿಯೇ ಕಡಿಮೆ ಮಟ್ಟಕ್ಕೆ ಕುಸಿತವಾಗಿದೆ. 2017 -18 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಠೇವಣಿಗಳ ಬೆಳವಣಿಗೆ ಶೇ. 6.7 ರಷ್ಟಿದೆ.

ಹೆಚ್ಚಿನ ಜನ ಠೇವಣಿಗಳನ್ನು ವಾಪಸ್ ಪಡೆಯುತ್ತಿದ್ದಾರೆ. ಇದರೊಂದಿಗೆ ಮ್ಯೂಚುವಲ್ ಫಂಡ್ ಗಳು ಮತ್ತು ವಿಮೆ ಯೋಜನೆಗಳು ಹೆಚ್ಚಿನ ರಿಟರ್ನ್ಸ್ ನೀಡ್ತಿವೆ. ಬ್ಯಾಂಕ್ ಗಳಿಗೆ ಪೈಪೋಟಿ ನೀಡುವಂತೆ ರಿಟರ್ನ್ಸ್ ನೀಡುತ್ತಿರುವುದು ಸೇರಿ ಹಲವು ಕಾರಣದಿಂದ ಠೇವಣಿಗಳ ಬೆಳವಣಿಗೆ ಕುಸಿತವಾಗಿದೆ.

ಇನ್ನು ಆರ್.ಡಿ., ನಿಶ್ಚಿತ ಠೇವಣಿ(ಎಫ್.ಡಿ.) ಮೊದಲಾದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಗಳು ಕಡಿಮೆ ಮಾಡಿದ್ದರಿಂದ ಜನ ಠೇವಣಿಗಳನ್ನು ವಾಪಸ್ ಪಡೆಯುತ್ತಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣ ಕಡಿಮೆಯಾಗ್ತಿದೆ.

ಠೇವಣಿಗಳಲ್ಲಿ ಹೂಡಿಕೆ ಮಾಡುವಂತೆ ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕ್ ಗಳು ತೀರ್ಮಾನಿಸಿದ್ದು, ಎಫ್.ಡಿ., ಆರ್.ಡಿ. ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಹೆಚ್ಚಿಸಲಿವೆ. ಹೆಚ್.ಡಿ.ಎಫ್.ಸಿ. ಬ್ಯಾಂಕ್ ಎಫ್.ಡಿ. ಉಳಿತಾಯ ಯೋಜನೆ ಬಡ್ಡಿದರವನ್ನು ಕಳೆದ ವಾರ ಹೆಚ್ಚಳ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...