alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಗಿಲು ಮುಚ್ಚಿದ ಬ್ಯಾಂಕ್ : ನಾಳೆಯೂ ಮುಂದುವರೆಯಲಿದೆ ಮುಷ್ಕರ

ವೇತನ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಯೂನಿಯನ್ ಪ್ರತಿಭಟನೆ ನಡೆಸುತ್ತಿದೆ. ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ಎರಡು ದಿನ ನಡೆಯಲಿದ್ದು ಅದ್ರ ಪರಿಣಾಮ ಈಗ್ಲೇ ಕಾಣ್ತಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ 85 ಸಾವಿರ ಬ್ಯಾಂಕ್ ಗಳು ಬಾಗಿಲು ಮುಚ್ಚಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಖಾಸಗಿ ಬ್ಯಾಂಕ್ ಗಳ ಕೆಲ ಖಾತೆಗಳು ಕೂಡ ಬಾಗಿಲು ಮುಚ್ಚಿವೆ. ಪ್ರತಿಭಟನೆಯಿಂದ ಬ್ಯಾಂಕ್ ನ ಯಾವುದೇ ಕೆಲಸವಾಗ್ತಿಲ್ಲ. ಇದ್ರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಎಟಿಎಂ ಗಳಲ್ಲಿ ಹಣದ ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಹೆಚ್ ಡಿ ಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕ್ ಗಳು ಎಟಿಎಂಗಳಿಗೆ ಹಣ ತುಂಬಿಸ್ತಿವೆ. ಬ್ಯಾಂಕ್ ಮುಷ್ಕರದ ಬಗ್ಗೆ ಮೊದಲೇ ತಿಳಿದಿದ್ದರಿಂದ ಮುಂಜಾಗ್ರತಾ ವ್ಯವಸ್ಥೆ ಮಾಡಿದ್ದೆವು ಎಂದು ಫೈನಾನ್ಶಿಯಲ್ ಸಾಫ್ಟವೇರ್ ಎಂಡ್ ಸಿಸ್ಟಂ ನ  ಅಧ್ಯಕ್ಷರು ಹೇಳಿದ್ದಾರೆ. ಬ್ಯಾಂಕ್ ಯೂನಿಯನ್ ಹಾಗೂ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮಧ್ಯೆ ನಡೆದ ಮಾತುಕಥೆ ವಿಫಲವಾಗಿದೆ. ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಶೇಕಡಾ 2ರಷ್ಟು ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದು ಬ್ಯಾಂಕ್ ಯೂನಿಯನ್ ಮುಷ್ಕರಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...