alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ‘ಆಧಾರ್’ ನೆಪ ಹೇಳಿ ಪೆನ್ಷನ್ ತಡೆಹಿಡಿಯಲು ಸಾಧ್ಯವಿಲ್ಲ

ನಿವೃತ್ತರು ಆಧಾರ್ ಇ-ವೆರಿಫಿಕೇಶನ್ ಮೂಲಕ ಲೈಫ್ ಸರ್ಟಿಪಿಕೇಟ್ ನವೀಕರಿಸಲು ಬಯಸಿದ್ರೆ ಅದನ್ನು ಬ್ಯಾಂಕ್ ತಡೆಯಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ಇ-ವೆರಿಫಿಕೇಶನ್, ಸಂಪೂರ್ಣ ಗ್ರಾಹಕನ ಆಯ್ಕೆ ಎಂದು ಕೋರ್ಟ್ ಹೇಳಿದೆ. ನಿವೃತ್ತರು ಆಧಾರ್ ನಂಬರ್ ಬದಲು ಬೇರೆ ದಾಖಲೆ ನೀಡಿದ್ರೆ ಅದನ್ನು ಅಧಿಕಾರಿಗಳು ಸ್ವೀಕರಿಸಬೇಕೆಂದು ಕೋರ್ಟ್ ಹೇಳಿದೆ.

ಲೈಫ್ ಸರ್ಟಿಫಿಕೇಟ್, ಬ್ಯಾಂಕ್ ಗೆ ನಿವೃತ್ತರು ನೀಡಬೇಕಾಗುತ್ತದೆ. ಅದನ್ನು ನೀಡದೆ ಹೋದಲ್ಲಿ ನಿಮ್ಮ ಪಿಂಚಣಿ ನಿಮಗೆ ಸಿಗುವುದಿಲ್ಲ. ಹಾಗಾಗಿ ಎಲ್ಲ ಬ್ಯಾಂಕ್ ಗಳು ತಮ್ಮ ಪಿಂಚಣಿ ಖಾತೆದಾರರಿಗೆ ಲೈಫ್ ಸರ್ಟಿಫಿಕೇಟ್ ನೀಡುವಂತೆ ಸೂಚನೆ ನೀಡಿದೆ. ನವೆಂಬರ್ 30 ರೊಳಗೆ ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್ ನೀಡಬೇಕು.

ಬ್ಯಾಂಕ್ ನ ಯಾವುದೇ ಶಾಖೆಯಲ್ಲಿ ಸರ್ಟಿಫಿಕೇಟ್ ಸಲ್ಲಿಸಬಹುದು. ಪಿಂಚಣಿದಾರ ಬ್ಯಾಂಕ್ ಗೆ ಬರಲು ಸಾಧ್ಯವಾಗದೆ ಹೋದ್ರೆ ಬೇರೆಯವರನ್ನು ಬ್ಯಾಂಕ್ ಗೆ ಕಳುಹಿಸಬಹುದು. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಎಸ್.ಬಿ.ಐ. ನಲ್ಲಿ 2017ರವರೆಗೆ ಸುಮಾರು 36 ಲಕ್ಷ ಪಿಂಚಣಿದಾರರು ಖಾತೆ ಹೊಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...