alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಲಿಂಕ್ ಮಾಡಿರುವ ಬ್ಯಾಂಕ್ ಖಾತೆದಾರರಿಗೊಂದು ಗುಡ್ ನ್ಯೂಸ್

ಆಧಾರ್ ಡಾಟಾಬೇಸ್‌ಗೆ ಕನ್ನ ಹಾಕಲಾಗುತ್ತದೆ ಹಾಗೂ ವೈಯಕ್ತಿಕ ಮಾಹಿತಿಗಳ ಕಳವು ಸಾಧ್ಯ ಎಂಬುದಾಗಿ ಅನೇಕ ಮಂದಿ ಆಗಾಗ್ಗೆ ಹೇಳುತ್ತಾ ಆಧಾರ್ ಸುರಕ್ಷತೆ ಕುರಿತು ಪ್ರಶ್ನೆಯೆತ್ತುತ್ತಾ ಬಂದಿದ್ದಾರೆ.

ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಇಂತಹ ಪ್ರತಿಯೊಂದು ಆರೋಪಗಳೂ ಸುಳ್ಳು ಹಾಗೂ ಆಧಾರರಹಿತ, ಆಧಾರ್ ಡಾಟಾಬೇಸ್ ಅನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾ ಬಂದಿದೆ.

ಕೆಲ ತಿಂಗಳ ಹಿಂದೆ ಟ್ರಾಯ್ ಅಧ್ಯಕ್ಷರು ಟ್ವಿಟರ್‌ನಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ಪೋಸ್ಟ್ ಮಾಡಿ, ತಾವು ಆಧಾರ್ ಸಂಖ್ಯೆಯನ್ನು ಬಹಿರಂಗಗೊಳಿಸುತ್ತಿದ್ದು, ಯಾರಾದರೂ ತಮಗೆ ಹಾನಿ ಮಾಡಬಹುದು ಎಂದು ಸವಾಲು ಹಾಕಿದ್ದರು. ಅದಕ್ಕೆ ಹ್ಯಾಕರ್ ಒಬ್ಬ ತಾನು ಫೋನ್ ನಂಬರ್ ಹ್ಯಾಕ್ ಮಾಡಿದ್ದೇನೆ ಎಂದರೆ, ಇನ್ನೊಬ್ಬ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದೇನೆ ಎಂದಿದ್ದ. ಆದರೆ ಈ ಎಲ್ಲಾ ಹೇಳಿಕೆಗಳನ್ನು ಯುಐಡಿಎಐ ತಿರಸ್ಕರಿಸಿತ್ತು.

ಕೇವಲ ಆಧಾರ್ ಸಂಖ್ಯೆಯ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಪ್ರವೇಶ ಸಾಧ್ಯವೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಎದ್ದಿತ್ತು. ಈ ಸಂಶಯ ನಿವಾರಣೆ ಮಾಡುವ ಸಲುವಾಗಿ ಯುಐಡಿಎಐ ಆಗಾಗ್ಗೆ ಕೇಳುವ ಪ್ರಶ್ನೆಗೆ (ಎಫ್ಎಕ್ಯೂ)ಗೆ ಪ್ರತಿಕ್ರಿಯಿಸಿದ್ದು. ಆಧಾರ್ ಕಾರ್ಡ್‌ದಾರನ ಕೇವಲ ಪ್ರಾಥಮಿಕ ಮಾಹಿತಿಗಳಾದ ಹೆಸರು, ಜನ್ಮದಿನಾಂಕ, ವಿಳಾಸ, ಚಿತ್ರ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಕಣ್ಣಿನ ಸ್ಕ್ಯಾನ್, ಬಯೋಮೆಟ್ರಿಕ್ ವಿವರಗಳನ್ನಷ್ಟೇ ಯುಐಡಿಎಐ ಹೊಂದಿರುತ್ತದೆ. ಅಲ್ಲದೆ, ಯಾರೊಬ್ಬರ ಬ್ಯಾಂಕ್ ಖಾತೆ, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿಗಳ ಯಾವುದೇ ಮಾಹಿತಿಯನ್ನು ಯುಐಡಿಎಐ ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಧಾರ್‌ ಕಾರ್ಡ್‌ದಾರ ಬ್ಯಾಂಕ್ ಖಾತೆ ಅಥವಾ ಮ್ಯೂಚುವಲ್ ಫಂಡ್ ಅಥವಾ ವಿಮಾ ಪಾಲಿಸಿಯೊಂದಿಗೆ ಕೆವೈಸಿಗಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದರೂ ಕೂಡಾ ಯುಐಡಿಎಐ ಕೇವಲ ತಾಳೆ ನೋಡುವ ಸಲುವಾಗಿ ಬಯೋಮೆಟ್ರಿಕ್ ವಿವರಗಳು ಹಾಗೂ ಹೆಸರನ್ನಷ್ಟೇ ಕಳುಹಿಸುತ್ತದೆ. ಬ್ಯಾಂಕ್ ಖಾತೆಗಳು, ಹೂಡಿಕೆಗಳು, ವಿಮೆ ಇತ್ಯಾದಿ ಯಾವುದೇ ಮಾಹಿತಿಯನ್ನು ಡಾಟಾಬೇಸ್ ಪಡೆಯುವುದಿಲ್ಲ ಎಂದೂ ಸ್ಪಷ್ಟವಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...