alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಕೆಲಸ ಮಾಡುವವರಿಗೆ ಗುಡ್ ನ್ಯೂಸ್

ನವದೆಹಲಿ: ಬೆಂಗಳೂರಿನಲ್ಲಿ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ನೀಡಲಾಗುತ್ತಿದೆ. ದೇಶದ ಇತರೆ ನಗರಗಳಿಗೆ ಹೋಲಿಸಿದಾಗ, ಬೆಂಗಳೂರಿನಲ್ಲಿ ವೃತ್ತಿನಿರತರಿಗೆ ಗರಿಷ್ಠ ವೇತನ ಸಿಗುತ್ತಿದೆ ಎಂದು ರ್ಯಾಂಡ್ ಸ್ಟಡ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ರ್ಯಾಂಡ್ ಸ್ಟಡ್ ಇಂಡಿಯಾ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವಾಗಿರುವ ರ್ಯಾಂಡ್ ಸ್ಟಡ್ ಇನ್ ಸೈಟ್ ನಿಂದ ಸಮೀಕ್ಷೆ ನಡೆಸಿ ನೀಡಲಾಗಿರುವ ವರದಿಯಲ್ಲಿ, ದೇಶದ ಉಳಿದ ನಗರಗಳಿಗಿಂತ ಬೆಂಗಳೂರಿನಲ್ಲಿ ಪ್ರತಿಭಾನ್ವಿತ ಉದ್ಯೋಗಿಗಳಿಗೆ ಹೆಚ್ಚು ವೇತನ ಸಿಗುತ್ತದೆ ಎಂದು ಹೇಳಲಾಗಿದೆ.

ಪುಣೆಯಲ್ಲಿ ಪ್ರತಿಭಾನ್ವಿತ ಉದ್ಯೋಗಿಗಳು ಸರಾಸರಿ ವಾರ್ಷಿಕ 10.3 ಲಕ್ಷ ರೂ. ವೇತನ ಪಡೆದರೆ, ಬೆಂಗಳೂರಿನಲ್ಲಿ ವಾರ್ಷಿಕ 10.8 ಲಕ್ಷ ರೂ. ವೇತನ ನೀಡಲಾಗುವುದು. ಫಾರ್ಮಾ, ಹೆಲ್ತ್ ಕೇರ್, ಜಿ.ಎಸ್.ಟಿ. ಸಂಬಂಧಿತ ವೃತ್ತಿಪರ ಸೇವೆಗಳಿಗೆ ಹೆಚ್ಚು ವೇತನ ಸಿಗುತ್ತಿದೆ.

ಉದ್ಯೋಗಿಗಳಿಗೆ ಸಂಸ್ಥೆ ನೀಡುವ ಒಟ್ಟಾರೆ ವೇತನಕ್ಕೆ ಕಾಸ್ಟ್ ಟು ಕಂಪನಿ(CTC) ಎಂದು ಕರೆಯಲಾಗುವುದು. ಹೆಚ್ಚು ವೇತನ ಇರುವ ವಲಯದಲ್ಲಿ ಐಟಿ 4 ನೇ ಸ್ಥಾನದಲ್ಲಿದ್ದು, ಈ ವಲಯದ ನೌಕರರು ವಾರ್ಷಿಕ 9.1 ಲಕ್ಷ ರೂ. ವೇತನ ಪಡೆಯುತ್ತಾರೆ.

ಇನ್ನು ಮೂಲಸೌಕರ್ಯ, ರಿಯಲ್ ಎಸ್ಟೇಟ್, ನಿರ್ಮಾಣ ವಲಯದಲ್ಲಿಯೂ ಹೆಚ್ಚಿನ ವೇತನವಿದೆ. ವೈದ್ಯಕೀಯ ಹೆಚ್ಚು ವೇತನದ ವಲಯದಲ್ಲಿ ಇಲ್ಲ. ಆದರೆ, 6 -10 ವರ್ಷ ಅನುಭವ ಹೊಂದಿರುವ ವೈದ್ಯರು ಹೆಚ್ಚು ಸಿ.ಟಿ.ಸಿ. ಪಡೆಯುತ್ತಾರೆ. ಆರ್ಕಿಟೆಕ್ಟ್ ಗಳು, ಪ್ರಾಡೆಕ್ಟ್ ಇಂಜಿನಿಯರ್ ಗಳು ಮೊದಲಾದ ವಲಯದವರಿಗೆ ಹೆಚ್ಚು ವೇತನವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...