alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರು ಏರ್ಪೋರ್ಟ್ ನಲ್ಲಿ ಅಳವಡಿಸಲಾಗಿದೆ ಈ ಪದ್ದತಿ

ನೀವು ವಿಮಾನ ಪ್ರಯಾಣಿಕರೇ, ಹಾಗಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ. ಬೆಂಗಳೂರು ಏರ್ಪೋರ್ಟ್ ನಲ್ಲಿ ಇನ್ನು ನೀವು ಬ್ಯಾಗ್ ತಪಾಸಣೆಗಾಗಿ ಕ್ಯೂ ನಿಲ್ಲಬೇಕಿಲ್ಲ. ನಿಮ್ಮ ಕೆಲಸ ಸುಲಭ ಮಾಡಲು ಸ್ವಯಂ ಚಾಲಿತ ತಪಾಸಣಾ ವ್ಯವಸ್ಥೆಯನ್ನು ಮಾಡಲಾಗಿದೆ.

ಹೌದು, ಇಂಥದ್ದೊಂದು ದೇಶದಲ್ಲೇ ಮೊದಲ ಪದ್ಧತಿಯನ್ನು ಅಳವಡಿಸಿರುವುದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ. ಈ ವಿನೂತನ ಪದ್ಧತಿಯಿಂದ ನೀವು ಕೇವಲ ನಲವತ್ತೈದು ಸೆಕೆಂಡ್ ಗಳಲ್ಲಿ ನಿಮ್ಮ ಬ್ಯಾಗ್ ತಪಾಸಣೆ ಪ್ರಕ್ರಿಯೆಯನ್ನು ಮುಗಿಸಬಹುದು.

ಇದರಿಂದ ಪ್ರಯಾಣಿಕರ ಕೆಲಸ ಸುಲಭವಾಗುವುದು ಮಾತ್ರವಲ್ಲದೆ, ವಿಮಾನ ನಿಲ್ದಾಣದ ತಪಾಸಣೆ ದೃಷ್ಟಿಯಿಂದಲೂ ಅನುಕೂಲ ಎಂದು ಹೇಳಲಾಗುತ್ತಿದೆ.

ಇದಕ್ಕಾಗಿ ಪ್ರಯಾಣಿಕರು ಮಾಡಬೇಕಾದ್ದಿಷ್ಟೇ, ಮೊದಲು ಬೋರ್ಡಿಂಗ್ ಪಾಸ್ ಪಡೆದು ನಂತರ ಸೆಲ್ಫ್ ಚೆಕ್ಕಿಂಗ್ ಬಳಿ ಹೋಗಿ ನಿಮ್ಮ ಬ್ಯಾಗನ್ನು ಇಟ್ಟರಾಯಿತು. ಅಲ್ಲಿಂದ ತಪಾಸಣೆಯ ಪ್ರಕ್ರಿಯೆ ಶುರುವಾಗುತ್ತದೆ. ಬ್ಯಾಗ್ ನಲ್ಲೇನಿದೆ, ಅದರ ತೂಕ ಗಾತ್ರ ಎಲ್ಲವೂ ಪರಿಶೀಲಿಸಿದ ನಂತರ ಬ್ಯಾಗ್ ಗಳ ನಿರ್ವಹಣಾ ಘಟಕಕ್ಕೆ ತಾನಾಗಿಯೇ ರವಾನೆ ಆಗುತ್ತದೆ.

ಸದ್ಯ ಈ ಸೇವೆ ಏರ್ ಏಷ್ಯಾ ಮತ್ತು ಸ್ಪೈಸ್ ಜೆಟ್ ನಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ವಿಮಾನಯಾನಕ್ಕೂ ವಿಸ್ತರಿಸುವ ಚಿಂತನೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...