alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅಗ್ಗದ ಕಾರಿನ ಕುರಿತ ಸತ್ಯಾಸತ್ಯತೆ ಏನು..?

bajaj-small-car-india-launch_827x510_41501680937

ಇಂಟರ್ನೆಟ್ ನಲ್ಲಿ ಇರೋದೆಲ್ಲಾ ಸತ್ಯವಲ್ಲ, ವಾಟ್ಸಾಪ್ ನಲ್ಲಿ ಬರೋ ಮಾಹಿತಿ, ಸುದ್ದಿ, ಮೆಸೇಜ್, ವಿಡಿಯೋ, ಫೋಟೋ ಕೂಡ ಎಲ್ಲವೂ ನಿಜವಲ್ಲ. ಕಳೆದೆರಡು ವಾರಗಳಿಂದ ಬಜಾಜ್ ಕಂಪನಿಯ ಅಗ್ಗದ ಕಾರಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿತ್ತು.

ಬಜಾಜ್ ಕಂಪನಿ ಭಾರತದಲ್ಲಿ ಈ ಕಾರನ್ನು ಲಾಂಚ್ ಮಾಡುತ್ತಿದ್ದು, ಬೆಲೆ ಕೇವಲ 60,000 ರೂಪಾಯಿ ಅನ್ನೋ ಮೆಸೇಜ್ ಎಲ್ಲೆಡೆ ಹರಿದಾಡುತ್ತಿತ್ತು. ಆದ್ರೆ ಇದೊಂದು ಸುಳ್ಳು ಸುದ್ದಿ. 6 ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದ ಬಜಾಜ್ ಕಾರಿನ ಫೋಟೋ ಸಮೇತ ಈ ಹುಸಿ ಸುದ್ದಿ ಎಲ್ಲಾ ಕಡೆ ಸದ್ದು ಮಾಡಿದೆ.

ಅದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ಬಜಾಜ್ ಕ್ಯೂಟ್ ಅನ್ನೋ ಕಾರನ್ನು 2015ರಲ್ಲೇ ಕಂಪನಿ ರಸ್ತೆಗಿಳಿಸಿತ್ತು. ಭಾರತದಲ್ಲಿ ಮಾತ್ರ ಈ ಕಾರು ಲಭ್ಯವಿರಲಿಲ್ಲ.  bajaj-qute_678x352_51443421717ಭಾರತದಲ್ಲಿ ಖಾಸಗಿ ಬಳಕೆಗಾಗಿ ಕ್ವಾಡ್ರುಸೈಕಲ್ಸ್ ಗಳನ್ನು ಮಾರುವಂತಿಲ್ಲ.

ಜೊತೆಗೆ ಭಾರತದ 4 ವೀಲರ್ ಕ್ರಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾದ ಫೀಚರ್ ಗಳು ಕೂಡ ಬಜಾಜ್ ಕ್ಯೂಟ್ ಕಾರಿನಲ್ಲಿಲ್ಲ. ಪ್ರಮುಖವಾಗಿ ಏರ್ ಬ್ಯಾಗ್ ಇಲ್ಲದೇ ಇರೋದ್ರಿಂದ ಭಾರತದ ಮಾರುಕಟ್ಟೆಗೆ ಬಜಾಜ್ ಕ್ಯೂಟ್ ಕಾರು ಸದ್ಯಕ್ಕಂತೂ ಪ್ರವೇಶಿಸುವುದು ಅನುಮಾನ. ಹಾಗಾಗಿ ಐಫೋನ್ 7 ಬೆಲೆಗೆ ಒಂದು ಕಾರನ್ನೇ ಕೊಳ್ಳಬಹುದು ಅನ್ನೋ ಆಸೆ ಬಿಟ್ಟುಬಿಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...