alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 2 ಲಕ್ಷ ರೂಪಾಯಿಗೆ ಸಿಗಲಿದೆ ಹೊಚ್ಚ ಹೊಸ ಕಾರು

ಕಾರ್ ಪ್ರತಿಯೊಬ್ಬರ ಕನಸು. ಮನೆಗೆ ಒಂದು ಎರಡು ಕಾರಿರುವ ಕಾಲ ಇದು. ಹಾಗಿರುವಾಗ ನಮ್ಮ ಮನೆಗೂ ಒಂದು ಕಾರ್ ಬೇಕು ಅಂತಾ ಕಾರಿಲ್ಲದವರು ಅಲವತ್ತುಕೊಳ್ತಾರೆ. ಹಾಗಂತ ಕಾರು ಮರದಿಂದ ಉದುರೋದಿಲ್ಲ. ಕೈತುಂಬ ಹಣಬೇಕು. ಸಾಲ ಸಿಗಬೇಕು. ಕಾರಿನ ಬೆಲೆ ಕೇಳಿ, ಕಾರಿನ ಸಹವಾಸ ಬೇಡ ಎನ್ನುವವರಿದ್ದಾರೆ. ಈಗ ಅಂತವರಿಗೊಂದು ಗುಡ್​​ನ್ಯೂಸ್.​​ ಕೇವಲ 2 ಲಕ್ಷಕ್ಕೆ ನೀವೂ ಕಾರು ಖರೀದಿ ಮಾಡಬಹುದು.

ಕ್ಯೂಟ್​​​ ಕ್ಯೂಟ್​​ ಆಗಿರುವ ಈ ಕಾರಿನ ಹೆಸರು ಬಜಾಜ್​ ಕ್ಯೂಟ್. ಇಷ್ಟು ದಿನ ಕೇವಲ ದ್ವಿಚಕ್ರ ವಾಹನಕ್ಕೆ ಫೇಮಸ್​​ ಆಗಿದ್ದ ಬಜಾಜ್​​ ಕಂಪನಿ ಈಗ ಕಾರಿನ ಉದ್ಯಮಕ್ಕೆ ಲಗ್ಗೆ ಇಟ್ಟಿದೆ. ಬಜಾಜ್ ಕಾರು ರಸ್ತೆಗಿಳಿಯಲು ಸಚಿವಾಲಯದ ಒಪ್ಪಿಗೆ ಸಿಕ್ಕಿದೆ.

ಬಜಾನ್​​ ಕಂಪನಿಯ ಈ ಬಜಾಜ್​ ಕ್ಯೂಟ್ ನಾಲ್ಕು ಗಾಲಿಯುಳ್ಳ ಪುಟ್ಟಕಾರು. ಈ ಮೇಡ್​​ ಇನ್​ ಇಂಡಿಯಾದ ಬಜಾಜ್ ಕ್ಯೂಟ್​​ ಕಾರ್​​​ ಇಷ್ಟು ದಿನ ವಿದೇಶದ ರಸ್ತೆಗಳಲ್ಲಿ ಓಡಾಡುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ಭಾರತದ ರಸ್ತೆಗಳ ಮೇಲೆ ಓಡಾಟ ಶುರು ಮಾಡಲಿದೆ.

ಈ ಕಾರ್​​ನ ಇನ್ನೊಂದು ವಿಶೇಷತೆ ಏನೆಂದರೆ ಇದರ ಇಂಜನ್​​. 216 ಸಿಸಿ ಇಂಧನವನ್ನ ಇದರಲ್ಲಿ ಅಳವಡಿಸಲಾಗಿದೆ. ಇದರ ವೇಗವು ಪ್ರತಿ ಗಂಟೆಗೆ 70 ಕಿಲೋಮೀಟರ್​​. ಮುಂದಿನ ಕೆಲವು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಕಾರುಗಳು ಮಾರುಕಟ್ಟೆಗೆ ಬರಲಿದ್ದು, ಅದರಲ್ಲಿ ಮಹೀಂದ್ರಾ, ಮಾರುತಿ, ಡೇಡ್​​ಸನ್​​, ಫೋರ್ಡ್ ಕಂಪನಿಗಳು ತಮ್ಮ ಕಂಪನಿಯ ಚಿಕ್ಕ ಕಾರ್​​​ ಮತ್ತು  ದೊಡ್ಡ ಐಶಾರಾಮಿಯ  ಕಾರ್​​​ಗಳನ್ನ ಮಾರುಕಟ್ಟೆಗೆ ತರಲು ಈಗಾಲೇ ಸಿದ್ಧತೆ ಮಾಡಿಕೊಂಡಿದೆ. ಆ ಕಾರ್​​ಗಳ ಲೀಸ್ಟ್​ನಲ್ಲಿ ಬಜಾಜ್​​ ಕ್ಯೂಟ್​​ ಕೂಡಾ ಒಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...