alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ರಸ್ತೆಗಿಳಿಯಲು ಸಜ್ಜಾಗಿದೆ ಬಜಾಜ್ ಕ್ಯೂಟ್ ಕಾರು

bajaj-qute-rear

ಬಜಾಜ್ ಆಟೋ ಕಂಪನಿ ತನ್ನ ಪುಟಾಣಿ ‘ಕ್ಯೂಟ್’ ಕಾರನ್ನು ಭಾರತದಲ್ಲಿ ಲಾಂಚ್ ಮಾಡ್ತಿದೆ ಅನ್ನೋ ಸುದ್ದಿಯಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ಮಧ್ಯೆ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಸ್ಟ್ ಡ್ರೈವ್ ಗೆ ಹೊರಟಿದ್ದ ಬಜಾಜ್ ಕ್ಯೂಟ್ ಕಾರು ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ.

ಹೈವೇನಲ್ಲಿ ಕ್ಯೂಟ್ ಕಾರಿನ ಸ್ಪೀಡ್ ಟೆಸ್ಟಿಂಗ್ ನಡೆಯುತ್ತಿದೆ. ಈ ಕಾರು 216.6 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿದೆ. ಫ್ಯೂಯೆಲ್ ಇಂಜೆಕ್ಟೆಡ್, ಡಿಜಿಟಲ್ ಟ್ರಿ ಸ್ಪಾರ್ಕ್ ಇಗ್ನಿಶನ್ ಇದರಲ್ಲಿದೆ. 5-ಸ್ಪೀಡ್ ಸೀಕ್ವೆನ್ಷಿಯಲ್ ಗೇರ್ ಬಾಕ್ಸ್ ಹೊಂದಿರೋ ಕಾರು 70 ಕಿಮೀ ವೇಗವಾಗಿ ಚಲಿಸಬಲ್ಲದು.

ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಜಾಜ್ ಕ್ಯೂಟ್ ಕಾರು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಕಾರು 2.75 ಮೀಟರ್ ಉದ್ದವಿದೆ. 1.65 ಮೀಟರ್ ಎತ್ತರವಿದೆ. ಚಾಲಕ ಸೇರಿ 4 ಮಂದಿ ಕುಳಿತುಕೊಳ್ಳಬಹುದು. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ 1.28 ಲಕ್ಷ ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...