alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕ್ಷೇತ್ರಕ್ಕೂ ಲಗ್ಗೆ ಇಡಲಿದೆ ಪತಂಜಲಿ…!

ನವದೆಹಲಿ: ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಹುತೇಕ ವಲಯಗಳಲ್ಲಿಯೂ, ತನ್ನದೇ ಆದ ಛಾಪು ಮೂಡಿಸುತ್ತಿರುವ ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿ, ಸೋಲಾರ್ ಉಪಕರಣಗಳ ತಯಾರಿಕೆಗೆ ಮುಂದಾಗಿದೆ.

ಭಾರತದ ಸೌರ ಮಾರುಕಟ್ಟೆ ಪ್ರಮುಖವಾಗಿ ಚೀನಾದ ಆಮದು ಉಪಕರಣಗಳನ್ನು ಅವಲಂಬಿಸಿದೆ. ಪತಂಜಲಿಯಿಂದ ಸ್ವದೇಶಿ ಚಳವಳಿಯ ಭಾಗವಾಗಿ ಪತಂಜಲಿ ಸೋಲಾರ್ ಉಪಕರಣಗಳನ್ನು ತಯಾರಿಸಲು ಯೋಜಿಸಲಾಗಿದೆ.

ಈಗಾಗಲೇ ಸೌರಶಕ್ತಿ ಉಪಕರಣಗಳ ತಯಾರಿಕೆಗೆ 100 ಕೋಟಿ ರೂ. ಹೂಡಿಕೆ ಮಾಡಲು ಪ್ಲಾನ್ ಮಾಡಿದ್ದು, ಗ್ರೇಟರ್ ನೋಯ್ಡಾದಲ್ಲಿರುವ ಕಾರ್ಖಾನೆಯಲ್ಲಿ ಕೆಲವೇ ದಿನಗಳಲ್ಲಿ ಉಪಕರಣಗಳ ತಯಾರಿಕೆ ಆರಂಭವಾಗಲಿದೆ ಎಂದು ಪತಂಜಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಅಡ್ವಾನ್ಸ್ ನೇವಿಗೇಷನ್ ಅಂಡ್ ಸೋಲಾರ್ ಟೆಕ್ನಾಲಜೀಸ್ ಪತಂಜಲಿ ತೆಕ್ಕೆಗೆ ಬಂದಿದೆ. ಇದರ ಮುಂದುವರೆದ ಭಾಗವಾಗಿ ಸೋಲಾರ್ ಉಪಕರಣಗಳ ತಯಾರಿಕೆಗೆ ಒತ್ತು ನೀಡಲಾಗಿದೆ. ಈಗಾಗಲೇ ಹಲವು ವಲಯದಲ್ಲಿ ಪತಂಜಲಿ ಸಂಚಲನ ಮೂಡಿಸಿದ್ದು, ಸೋಲಾರ್ ವಲಯಕ್ಕೂ ಎಂಟ್ರಿ ಕೊಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...