alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತು ವಿವಾದದಲ್ಲಿ ಪತಂಜಲಿಗೆ ಸಂಕಷ್ಟ

ಪತಂಜಲಿ ಸಾಬೂನುಗಳ ಜಾಹೀರಾತುಗಳ ಪ್ರಸಾರವನ್ನು ಕೂಡಲೇ ನಿಲ್ಲಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ. ಜಾಹೀರಾತಿನಲ್ಲಿ ಪತಂಜಲಿ ಡೆಟ್ಟಾಲ್ ಕಂಪನಿಗೆ ಅವಮಾನ ಮಾಡಿದೆ ಅನ್ನೋ ಆರೋಪವಿದೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಒಂದೇ ಜಾಹೀರಾತಿಗೆ ಒಂದು ವಾರದಲ್ಲಿ ಎರಡನೇ ಬಾರಿಗೆ ಕೋರ್ಟ್ ಆದೇಶ ಹೊರಬಿದ್ದಿದೆ. ಮುಂಬೈ ಹೈಕೋರ್ಟ್ ಕೂಡ ಸಪ್ಟೆಂಬರ್ 18ರ ಮುಂದಿನ ವಿಚಾರಣೆವರೆಗೆ ಸಾಬೂನು ಜಾಹೀರಾತು ಪ್ರಸಾರ ಮಾಡದಂತೆ ಸೂಚಿಸಿತ್ತು. ಬಾಂಬೆ ಹೈಕೋರ್ಟ್ ಗೆ HUL ದೂರು ಸಲ್ಲಿಸಿದೆ.

RBಯ ಡೆಟ್ಟಾಲ್ ಸಾಬೂನು ಹಾಗೂ HULನ ಪಿಯರ್ಸ್ ಮತ್ತು ಲೈಫ್ ಬಾಯ್ ಸೋಪ್ ಗಳಿಗೆ ಪತಂಜಲಿಯ ಸಾಬೂನು ಜಾಹೀರಾತಿನಲ್ಲಿ ಅವಮಾನ ಮಾಡಲಾಗಿದೆ. ಇದರಿಂದ 1 ಕೋಟಿ ರೂ. ನಷ್ಟವಾಗಿದ್ದು, ಅದನ್ನು ಪತಂಜಲಿ ತುಂಬಿಕೊಡಬೇಕು. ಜೊತೆಗೆ ಜಾಹೀರಾತುಗಳಿಗೆ ನಿರ್ಬಂಧ ಹೇರಬೇಕೆಂದು ದೂರು ನೀಡಲಾಗಿತ್ತು.

ಡೆಟ್ಟಾಲ್ ಅನ್ನು ಧಿತೋಲ್ ಎಂದು, ಪಿಯರ್ಸ್ ಅನ್ನು ಟಿಯರ್ಸ್ ಎಂದು ಮತ್ತು ಲೈಫ್ ಬಾಯ್ ಅನ್ನು ಲೈಫ್ ಜಾಯ್ ಅಂತಾ ಪತಂಜಲಿ ವ್ಯಂಗ್ಯ ಮಾಡಿದೆ. ಕೆಲದಿನಗಳ ಹಿಂದಷ್ಟೆ ಪತಂಜಲಿಯ ಆಮ್ಲಾ ಜ್ಯೂಸ್ ಕುಡಿಯಲು ಯೋಗ್ಯವಾಗಿಲ್ಲ ಅನ್ನೋದನ್ನು ಕೋಲ್ಕತ್ತಾದ ಪ್ರಯೋಗಾಲಯ ದೃಢಪಡಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...