alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರನ್ನು ಸೆಳೆಯುತ್ತಿವೆ ಪತಂಜಲಿಯ ಹೊಸ ಉತ್ಪನ್ನಗಳು

ಯೋಗ ಗುರು ಬಾಬಾ ರಾಮ್ ದೇವ್ ಗಣೇಶ ಚತುರ್ಥಿ ಪ್ರಯುಕ್ತ ತಮ್ಮ ಪತಂಜಲಿ ಬ್ರ್ಯಾಂಡ್ ನ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಹಸುವಿನ ಹಾಲು, ತುಪ್ಪ, ಪನ್ನೀರ್, ಮಜ್ಜಿಗೆ ಸೇರಿದಂತೆ ಹಲವು ಉತ್ಪನ್ನಗಳು ದೆಹಲಿ, ಮುಂಬೈ, ಪುಣೆ, ರಾಜಸ್ಥಾನ್ ಮತ್ತು ಇತರ ಕಡೆಗಳಲ್ಲಿ ಬಿಡುಗಡೆಯಾಗಿದೆ.

ಇದರ ಮುಂದುವರೆದ ಭಾಗವಾಗಿ ತರಕಾರಿ ಸೇರಿದಂತೆ ಹಲವು ಉತ್ಪನ್ನಗಳನ್ನ ಮಾರುಕಟ್ಟೆ ತಲುಪಲಿವೆ. ಇದೇ ಸಂದರ್ಭದಲ್ಲಿ ಪತಂಜಲಿ ಮಿನರಲ್ ವಾಟರ್ ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಪತಂಜಲಿ ಉತ್ಪನ್ನಗಳ ಲಾಂಚ್ ಸಮಾರಂಭದಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಪತಂಜಲಿ ಉತ್ಪನ್ನಗಳು ಶೇಕಡಾ 100 ರಷ್ಟು ಪರಿಶುದ್ಧವಾಗಿವೆ. ಮಾರುಕಟ್ಟೆಯಲ್ಲಿ ಪತಂಜಲಿ ಉತ್ಪನ್ನಗಳು ರುಚಿಗೂ ಕೂಡ ಹೆಸರುವಾಸಿಯಾಗಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಿಸೋದಾಗಿ ತಿಳಿಸಿದ್ದಾರೆ. ಸದ್ಯ 10 ಲಕ್ಷ ಲೀಟರ್ ಗಳಷ್ಟಿರುವ ಪತಂಜಲಿ ಹಾಲಿನ ಉತ್ಪಾದನೆಯ ಪ್ರಮಾಣ ಮುಂದಿನ ದಿನಗಳಲ್ಲಿ 40 ಲಕ್ಷ ಲೀಟರ್ ಗೆ ಏರಿಕೆಯಾಗಲಿದೆಯಂತೆ.

2000 ಗ್ರಾಮಗಳ 1ಲಕ್ಷಕ್ಕೂ ಹೆಚ್ಚು ರೈತರಿಂದ ನೇರ ಖರೀದಿ ಮಾಡಿ ಮಾರುಕಟ್ಟೆಗೆ ಹಾಲನ್ನ ಬಿಡುಗಡೆ ಮಾಡ್ತಿರೋದಾಗಿ ಯೋಗಗುರು ತಿಳಿಸಿದ್ದಾರೆ. ದೇಶದ 56,000 ಮಾರಾಟಗಾರರು ಮತ್ತು ರೀಟೈಲ್ ಉದ್ದಿಮೆದಾರರು ಪತಂಜಲಿ ಉತ್ಪನ್ನಗಳನ್ನ ಗ್ರಾಹಕರ ಮನೆ ಮನೆಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ ಎಂದಿದ್ದಾರೆ ಯೋಗ ಗುರು. ರೋಸ್ ಮಿಲ್ಕ್ ಮತ್ತು ವಸ್ತ್ರ ಭಂಡಾರ ತಯಾರಿಕಾ ಘಟಕವನ್ನ ಆರಂಭಿಸೋದಕ್ಕೂ ಪತಂಜಲಿ ಮುಂದಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...