alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಗೆ ಜಾಹೀರಾತು ನೀಡಲು ನಿರಾಕರಿಸಿದ ಪತಂಜಲಿ

ಯೋಗ ಗುರು ಬಾಬಾ ರಾಮ್ದೇವ್ ಕಂಪನಿ ಪತಂಜಲಿ ಆಯುರ್ವೇದ ಇಂಡಿಯಾ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಜಾಹೀರಾತು ಪ್ರಸಾರ ಮಾಡುವುದಿಲ್ಲವಂತೆ. ಕ್ರಿಕೆಟ್ ಅದ್ರಲ್ಲೂ ಐಪಿಎಲ್ ವಿದೇಶಿ ಆಟವಾಗಿದ್ದು. ಈ ಕಾರಣಕ್ಕೆ ಜಾಹೀರಾತು ನೀಡುವುದಿಲ್ಲವೆಂದು ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟ್ ಅದ್ರಲ್ಲೂ ಐಪಿಎಲ್ ವಿದೇಶಿ ಆಟವಾಗಿದೆ. ಈ ಪಂದ್ಯಗಳ ಜಾಹೀರಾತುಗಳು ಗ್ರಾಹಕರನ್ನು ಉತ್ತೇಜಿಸುತ್ತವೆ. ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜಕತ್ವದಲ್ಲಿ ನಡೆಯುತ್ತವೆ. ಕಬಡ್ಡಿ, ಕುಸ್ತಿಯಂತಹ ದೇಶಿಯ ಆಟಗಳಿಗೆ ಪತಂಜಲಿ ಪ್ರೋತ್ಸಾಹ ನೀಡಲಿದೆ. ಈ ಪಂದ್ಯಾವಳಿಗಳಿಗೆ ಪತಂಜಲಿ ಜಾಹೀರಾತು ನೀಡಿ ದೇಶಿ ಕ್ರೀಡೆಗೆ ಪ್ರೋತ್ಸಾಹ ನೀಡಲಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ.

ಕಳೆದ ವರ್ಷ ಪತಂಜಲಿ ಪ್ರೋ –ವ್ರೆಸ್ಲಿಂಗ್ ಪ್ರಾಯೋಜಿಸಿತ್ತು. ರಾಮ್ದೇವ್ ಕಂಪನಿ ಎರಡು ವರ್ಷಗಳ ಹಿಂದೆ ಕಬಡ್ಡಿ ವಿಶ್ವಕಪ್ ಸಹ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆಗ್ಲೇ ಭಾರತೀಯ ಕ್ರೀಡೆಗಳಲ್ಲಿ ಹೂಡಿಕೆ ಮುಂದುವರೆಸುವುದಾಗಿ ಬಾಲಕೃಷ್ಣ ಹೇಳಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...