alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಪಟಾಕಿ ಸಿಡಿಸಲು ಬಾಬಾ ರಾಮ್ದೇವ್ ಸಿದ್ಧತೆ

ದೇಶದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿರುವ ಬಾಬಾ ರಾಮ್ದೇವ್ ಬ್ರಾಂಡ್ ಪತಂಜಲಿ ಮತ್ತೊಂದು ಪಟಾಕಿ ಸಿಡಿಸಲು ಸಿದ್ಧವಾಗ್ತಿದೆ. ಈ ಬಾರಿ ಪತಂಜಲಿ, ಗಾರ್ಮೆಂಟ್ ಉದ್ಯಮಕ್ಕೆ ಬಿಸಿ ಮುಟ್ಟಿಸುವ ತಯಾರಿಯಲ್ಲಿದೆ. ಗಿಡಮೂಲಿಕೆ ಮೂಲಕ ಜನಮನ ಗೆದ್ದಿರುವ ಪತಂಜಲಿ ಕಂಪನಿ ಈಗ  ಗಾರ್ಮೆಂಟ್ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲಿದೆ.

ಶೀಘ್ರದಲ್ಲಿಯೇ ಪತಂಜಲಿ ಒಳ ಉಡುಪು ಸೇರಿದಂತೆ ಕ್ರೀಡಾ ಬಟ್ಟೆಯವರೆಗೆ ಎಲ್ಲವನ್ನೂ ಮಾರುಕಟ್ಟೆಗೆ ತರಲಿದೆ. ಈ ಬಗ್ಗೆ ಖುದ್ದು ಬಾಬಾ ರಾಮ್ದೇವ್ ಮಾಹಿತಿ ನೀಡಿದ್ದಾರೆ. ವರ್ಷಾಂತ್ಯದಲ್ಲಿ ಪತಂಜಲಿ ಬಟ್ಟೆ ಮಾರುಕಟ್ಟೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದ್ರಲ್ಲಿ ಪುರುಷರು ಹಾಗೂ ಮಹಿಳೆಯರ ಬಟ್ಟೆಗಳಿರಲಿವೆ. ಒಳ ಉಡುಪು, ಯೋಗ ಉಡುಪು ಹಾಗೂ ಕ್ರೀಡಾ ಉಡುಪುಗಳು ಇದ್ರಲ್ಲಿ ಸೇರಿವೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.

ಜೀನ್ಸ್ ನಿಂದ ಹಿಡಿದು ಸ್ವೆಟರ್ ವರೆಗೆ ಎಲ್ಲ ರೀತಿಯ ಬಟ್ಟೆಗಳನ್ನು ಮಾರುಕಟ್ಟೆಗೆ ತಂದು ವಿದೇಶಿ ಕಂಪನಿಗಳಿಗೆ ಟಕ್ಕರ್ ನೀಡುವುದು ಇದ್ರ ಉದ್ದೇಶವಾಗಿದೆ. ಪತಂಜಲಿ ಉತ್ಪನ್ನಗಳು ಸದ್ಯ ದೇಶದಾದ್ಯಂತ ಜನಮನ ಗೆದ್ದಿವೆ. ಇತ್ತೀಚಿಗೆ ನಡೆದ ಸರ್ವೆಯೊಂದರ ಪ್ರಕಾರ ಪತಂಜಲಿಯ ಬಾಲಕೃಷ್ಣ ದೇಶದ 8ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...