alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮದೇವ್ ಶುರು ಮಾಡಲಿದ್ದಾರೆ ದೇಸಿ ಜೀನ್ಸ್

ramdev

ಪತಂಜಲಿ ಉತ್ಪನ್ನಗಳ ಮೂಲಕ ಭಾರತೀಯರ ಮನಸ್ಸು ಗೆಲ್ಲುವಲ್ಲಿ ಬಾಬಾ ರಾಮದೇವ್ ಯಶಸ್ವಿಯಾಗಿದ್ದಾರೆ. ಪತಂಜಲಿಯ ಸಾಕಷ್ಟು ಆಹಾರೋತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಉತ್ತರ ಪ್ರದೇಶ ಸರ್ಕಾರ, ಬಾಬಾ ರಾಮದೇವ್ ರ 2 ಸಾವಿರ ಕೋಟಿ ರೂಪಾಯಿ ಯೋಜನೆಗೆ ಅಸ್ತು ಎಂದಿದೆ.

ಕರ್ನಾಟಕ ಸೇರಿದಂತೆ 10 ಕಡೆ ಬೃಹತ್ ಪತಂಜಲಿ ಉತ್ಪಾದನ ಘಟಕ ಸ್ಥಾಪಿಸುವ ಬಗ್ಗೆಯೂ ಬಾಬಾ ರಾಮದೇವ್ ಚಿಂತನೆ ನಡೆಸಿದ್ದಾರೆ. ಈ ನಡುವೆ ಇನ್ನೊಂದು ಉದ್ಯಮಕ್ಕೆ ಧುಮುಕಲು ಬಾಬಾ ರಾಮದೇವ್ ಸಿದ್ಧತೆ ನಡೆಸಿದ್ದಾರೆ.

ಶೀಘ್ರದಲ್ಲಿಯೇ ಉಡುಪಿನ ಬ್ರ್ಯಾಂಡ್ ಗೆ ಬಾಬಾ ರಾಮದೇವ್ ಕೈ ಹಾಕಲಿದ್ದಾರೆ. ಬಾಬಾ ರಾಮದೇವ್ ರ ದೇಸಿ ಜೀನ್ಸ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಚೇರಿಗೆ ಧರಿಸಬಹುದಾದಂತಹ ಬಟ್ಟೆಗಳ ಜೊತೆಗೆ ಜೀನ್ಸ್ ಕೂಡ ಇದರಲ್ಲಿ ಸೇರ್ಪಡೆಯಾಗಲಿದೆ. ಬಾಂಗ್ಲಾದೇಶ ಹಾಗೂ ಆಫ್ರಿಕಾ ದೇಶಗಳಲ್ಲಿಯೂ ಇದರ ಕಾರ್ಖಾನೆ ಆರಂಭವಾಗಲಿದೆ.

ಪತಂಜಲಿ ಯೋಗಾ ಡ್ರೆಸ್ ಬಗ್ಗೆ ಅಭಿಮಾನಿಗಳು ಕೇಳಿದ್ದರಂತೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಾಬಾ ರಾಮದೇವ್ ಯಾಕೆ ಬಟ್ಟೆ ಉದ್ಯಮಕ್ಕೆ ಕೈ ಹಾಕಬಾರ್ದು ಎಂದು ಚಿಂತಿಸಿದ್ರಂತೆ. ಪುರುಷರು ಹಾಗೂ ಮಹಿಳೆಯರ ಸಾಂಪ್ರದಾಯಿಕ ಉಡುಗೆಯೊಂದೇ ಅಲ್ಲ ಜೀನ್ಸ್ ಕೂಡ ಮಾರಾಟ ಮಾಡುವುದಾಗಿ ರಾಮದೇವ್ ಹೇಳಿದ್ದಾರೆ. ಅದಕ್ಕೆ ದೇಸಿ ಜೀನ್ಸ್ ಎನ್ನೋಣ ಎನ್ನುತ್ತಾರೆ ಬಾಬಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...