alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ವರ್ಷ ಆನ್ಲೈನ್ ನಲ್ಲಿ ಸಿಗಲಿದೆ ಪತಂಜಲಿ ಡ್ರೆಸ್

ಯೋಗ ಗುರು, ಪತಂಜಲಿ ಆಯುರ್ವೇದದ ಸಹ ಸಂಸ್ಥಾಪಕ ಬಾಬಾ ರಾಮ್ದೇವ್ ಗುರುವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಪತಂಜಲಿ ಮುಂದಿನ ವರ್ಷ ಜವಳಿ ಉದ್ಯಮಕ್ಕೆ ಪದಾರ್ಪಣೆ ಮಾಡಲಿದೆ. ಗೋವಾ ಫೆಸ್ಟ್ 2018ರಲ್ಲಿ ಮಾತನಾಡಿದ ಬಾಬಾ ಪತಂಜಲಿ ಜವಳಿ ಉದ್ಯಮದ ಬಗ್ಗೆ ಮಾಹಿತಿ ನೀಡಿದ್ರು.

ಜನರು ಪತಂಜಲಿ ಜೀನ್ಸ್ ಯಾವಾಗ ಬರುತ್ತೆ ಎಂದು ಪ್ರಶ್ನೆ ಮಾಡ್ತಿದ್ದಾರೆ. ಮುಂದಿನ ವರ್ಷ ಮಕ್ಕಳು, ಮಹಿಳೆಯರು ಸೇರಿದಂತೆ ಪುರುಷರ ಬಟ್ಟೆಗಳು ಮಾರುಕಟ್ಟೆಗೆ ಬರ್ತಿದೆ. ಕಂಪನಿ ಮೊದಲ ವರ್ಷ 5 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಿದೆ ಎಂದು ರಾಮ್ದೇವ್ ಹೇಳಿದ್ದಾರೆ.

ಕೈನಲ್ಲಿ ನೇಯ್ದ ಬಟ್ಟೆ ಜೊತೆಗೆ ಮಷಿನ್ ನಲ್ಲಿ ಸಿದ್ಧವಾದ ಬಟ್ಟೆಯನ್ನೂ ಕಂಪನಿ ಮಾರಾಟ ಮಾಡಲಿದೆಯಂತೆ. ಪರಿದಾನ್ ಎಂದು ಬಟ್ಟೆ ಅಂಗಡಿಗೆ ಹೆಸರಿಡಲು ನಿರ್ಧರಿಸಲಾಗಿದೆ. ಆರಂಭದಲ್ಲಿ 250 ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಬಿಗ್ ಬಜಾರ್ ನಂತಹ ರಿಟೇಲ್ ಔಟ್ಲೆಟ್ ಜೊತೆ ಆನ್ಲೈನ್ ನಲ್ಲಿ ಕೂಡ ಬಟ್ಟೆ ಸಿಗಲಿದೆ. ಫೇಸ್ಬುಕ್ ಹಾಗೂ ಗೂಗಲ್ ಜೊತೆ ಪತಂಜಲಿ ಒಪ್ಪಂದ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...