alex Certify
ಕನ್ನಡ ದುನಿಯಾ       Mobile App
       

Kannada Duniya

ಪತಂಜಲಿ ಉತ್ತರಾಧಿಕಾರಿ ಯಾರು ಗೊತ್ತಾ?

baba_ramdev

ಪತಂಜಲಿ ಆಯುರ್ವೇದದ ಮುಖ್ಯಸ್ಥ ಹಾಗೂ ಯೋಗ ಗುರು ಬಾಬಾ ರಾಮ್ ದೇವ್ ತಮ್ಮ ಉತ್ತರಾಧಿಕಾರಿ ಯಾರೆನ್ನುವ ಬಗ್ಗೆ ಮಹತ್ವದ ವಿಷಯ ಬಿಚ್ಚಿಟ್ಟಿದ್ದಾರೆ. ಬಾಬಾ ರಾಮ್ ದೇವ್ ಟ್ವೀಟರ್ ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಪತಂಜಲಿಯ ಉತ್ತರಾಧಿಕಾರಿ ಯಾವುದೇ ವ್ಯಾಪಾರಿಯಲ್ಲ. ಸನ್ಯಾಸಿ ಪುರುಷ ಅಥವಾ ಮಹಿಳೆ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಆಸ್ತಿಯನ್ನು ನೋಡಿಕೊಳ್ಳಲಿದ್ದಾರೆಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.

ಪತಂಜಲಿ ಆಯುರ್ವೇದದ ಸಿಇಓ ಜವಾಬ್ದಾರಿಯನ್ನು ಬಾಲಕೃಷ್ಣ ವಹಿಸಿಕೊಂಡಿದ್ದಾರೆ. ಸಂಪೂರ್ಣ ಹೊಣೆ ಯೋಗಗುರು ಬಾಬಾ ರಾಮ್ ದೇವ್ ಮೇಲಿದೆ. ರಾಮ್ ದೇವ್ ಸಹೋದರ ಭರತ್ ಯಾದವ್ ಕೂಡ ರಾಮ್ ದೇವ್ ಗೆ ನೆರವಾಗ್ತಿದ್ದಾರೆ. 2020ರಲ್ಲಿ ಪತಂಜಲಿ 1 ಲಕ್ಷ ಕೋಟಿ ಉತ್ಪಾದನೆಯ ಗುರಿ ಹೊಂದಿದೆ.

ಮೊನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಬಾಬಾ ರಾಮ್ ದೇವ್, 4 ವರ್ಷಗಳಲ್ಲಿ ಪತಂಜಲಿ ಶೇಕಡಾ 100ರಷ್ಟು ಬೆಳವಣಿಗೆ ಕಂಡಿದೆ. ಈ ವರ್ಷ ಕೂಡ ಇದೇ ವೇಗದಲ್ಲಿ ನಾವು ಮುನ್ನಡೆಯುತ್ತಿದ್ದೇವೆ. 2020ರ ವೇಳೆಗೆ 1 ಲಕ್ಷ ಕೋಟಿ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...