alex Certify
ಕನ್ನಡ ದುನಿಯಾ       Mobile App
       

Kannada Duniya

ಜ.26 ರಿಂದ ಪತಂಜಲಿ ಆರಂಭಿಸಲಿದೆ ಹೊಸ ಸೇವೆ

ಯೋಗಗುರು ಬಾಬಾ ರಾಮ್ದೇವ್ ಪತಂಜಲಿ ಉತ್ಪನ್ನವನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ. ಇತ್ತೀಚೆಗಷ್ಟೇ ಪತಂಜಲಿ ಕಂಪನಿ ಇ ಕಾಮರ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಪತಂಜಲಿ ಮುಂದಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಾಗೂ ಉಚಿತವಾಗಿ ಕೆಲವೊಂದು ವಸ್ತುಗಳು ಸಿಗಲಿದೆಯಂತೆ.

ಪತಂಜಲಿ ಡಿಜಿಟಲ್ ವ್ಯವಹಾರಕ್ಕಾಗಿ ಸ್ವದೇಶಿ ಸಮೃದ್ಧಿ ಕಾರ್ಡ್ ಜಾರಿಗೆ ತರ್ತಿದೆ. ಜನವರಿ 26ರಂದು ಈ ಕಾರ್ಡ್ ಬಿಡುಗಡೆಯಾಗಲಿದೆ. ಸ್ವದೇಶಿ ಕಾರ್ಡ್ ಹೊಂದಿದವರಿಗೆ ಸ್ವದೇಶಿ ನಿಷ್ಠ ಸಹಯೋಗ ಯೋಜನೆಯಡಿ ಭೀಮಾ ವಿಮೆ ಸಿಗಲಿದೆ. ಕಾರ್ಡ್ ದಾರರು ಸಾವನ್ನಪ್ಪಿದ್ರೆ ನಾಮಿನಿಗೆ 5 ಲಕ್ಷ ರೂಪಾಯಿ ಹಾಗೂ ಅಂಗವಿಕಲರಿಗೆ 2.5 ಲಕ್ಷ ರೂಪಾಯಿಯನ್ನು ಪತಂಜಲಿ ನೀಡಲಿದೆ.

ಯೋಜನೆಯಡಿ ಕಾರ್ಡ್ ದಾರರಿಗೆ ಡೆಬಿಟ್ ಕಾರ್ಡ್ ನೀಡಲಾಗುವುದು. ಪತಂಜಲಿ ಅಂಗಡಿ, ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಈ ಕಾರ್ಡ್ ಮೂಲಕ ವ್ಯವಹಾರ ನಡೆಸಬಹುದಾಗಿದೆ. ಕಾರ್ಡ್ ಮೇಲೆ ತ್ರಿವರ್ಣ ಧ್ವಜದ ಜೊತೆ ರಾಮ್ದೇವ್ ಹಾಗೂ ಬಾಲಕೃಷ್ಣರ ಫೋಟೋ ಇರಲಿದೆ.

ಈ ಕಾರ್ಡ್ ಹೊಂದಿದವರಿಗೆ ಪತಂಜಲಿ ಉತ್ಪನ್ನದ ಮೇಲೆ ಶೇಕಡಾ 5-10ರಷ್ಟು ರಿಯಾಯಿತಿ ಸಿಗಲಿದೆ. ಕಾರ್ಡ್ ಪಡೆಯಲು 150 ರೂಪಾಯಿ ನೀಡಬೇಕಾಗುತ್ತದೆ. ಇದ್ರ ಜೊತೆಗೆ ಕಾರ್ಡ್ ನವೀಕರಣಕ್ಕಾಗಿ ವರ್ಷಕ್ಕೆ 20 ರೂಪಾಯಿ ನೀಡಬೇಕಾಗುತ್ತದೆ.  ಆರಂಭದಲ್ಲಿ ಸಾವಿರ ರೂಪಾಯಿ ಟಾಪ್ ಅಪ್ ರಿಚಾರ್ಜ್ ಮಾಡಬೇಕಾಗುತ್ತದೆ. 500 ರೂಪಾಯಿ ಕನಿಷ್ಠ ಹಣ ಕಾರ್ಡ್ ನಲ್ಲಿರಬೇಕು. ಹೆಚ್ಚು ಹೆಚ್ಚು ಹಣವನ್ನು ರಿಚಾರ್ಜ್ ಮಾಡಿದ್ರೆ ಹೆಚ್ಚು ಹೆಚ್ಚು ರಿಯಾಯಿತಿಯನ್ನು ಕಾರ್ಡ್ ದಾರರಿಗೆ ಪತಂಜಲಿ ನೀಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...