alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಅಮೆಜಾನ್, ಫ್ಲಿಪ್ಕಾರ್ಟ್ ನಲ್ಲಿ ಸಿಗಲಿದೆ ಪತಂಜಲಿ

ಯೋಗ ಗುರು ಬಾಬಾ ರಾಮ್ದೇವ್ ತಮ್ಮ ಪತಂಜಲಿ ಉತ್ಪನ್ನದ ಆನ್ಲೈನ್ ಮಾರಾಟವನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ಬಾಬಾ ರಾಮ್ದೇವ್ ಹಾಗೂ ಬಾಲಕೃಷ್ಣ ಮೆಗಾ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ. ಪತಂಜಲಿ ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಪ್ರಮುಖ ಆನ್ಲೈನ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ ಮತ್ತು ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲಿದೆ.

ಮಾಹಿತಿ ಪ್ರಕಾರ ಜನವರಿ 16ರಂದು ಬಾಬಾ ರಾಮ್ದೇವ್ ನೇತೃತ್ವದಲ್ಲಿ ದೊಡ್ಡ ಕಾರ್ಯಕ್ರಮವೊಂದು ನಡೆಯಲಿದೆ. ಅಲ್ಲಿ ರಾಮ್ದೇವ್, ಬಾಲಕೃಷ್ಣ ಜೊತೆ ಅಮೆಜಾನ್, ಫ್ಲಿಪ್ಕಾರ್ಟ್, ಗ್ರೊಫೋರ್ಸ್ ಸೇರಿದಂತೆ ಆನ್ಲೈನ್ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಅಂದೇ ಆನ್ಲೈನ್ ಕಂಪನಿ ಜೊತೆ ಪತಂಜಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಪ್ರಸ್ತುತ ತನ್ನ ವೈಯಕ್ತಿಕ ಪೋರ್ಟಲ್ ನಲ್ಲಿ ಪತಂಜಲಿ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಆದ್ರೀಗ ದೊಡ್ಡ ಮಟ್ಟದಲ್ಲಿ ಆನ್ಲೈನ್ ಕ್ಷೇತ್ರ ಪ್ರವೇಶ ಮಾಡಲು ಪತಂಜಲಿ ನಿರ್ಧರಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...