alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರಲಿದೆ ಪತಂಜಲಿಯ ಮತ್ತಷ್ಟು ಉತ್ಪನ್ನ

ಬಾಬಾ ರಾಮ್ದೇವ್ ಪತಂಜಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ತಯಾರಿಯಲ್ಲಿದೆ. 2018ರ ಹಣಕಾಸು ವರ್ಷ ನಿರಾಶಾದಾಯಕವಾಗಿತ್ತು. ಆದ್ರೆ ಮುಂದಿನ ದಿನಗಳಲ್ಲಿ ಬೆಳವಣಿಗೆ ನಿರೀಕ್ಷೆ ಮಾಡಲಾಗಿದೆ. 2022ರ ಸುಮಾರಿಗೆ 50 ಶತಕೋಟಿ ಗುರಿ ಹೊಂದಿದ್ದೇವೆಂದು ಕಂಪನಿ ಎಂಡಿ ಬಾಲಕೃಷ್ಣ ಹೇಳಿದ್ದಾರೆ.

ನೋಯ್ಡಾದಲ್ಲಿ ವಸ್ತ್ರೋದ್ಯಮದ ಕೆಲಸ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಒಂದು ತಂಡ ಸಿದ್ಧವಿದೆ. ಉಡುಪನ್ನು ಮೂರನೇ ವ್ಯಕ್ತಿಯಿಂದ ತಯಾರಿಸಲಾಗುವುದು. ಪತಂಜಲಿ ಆರಂಭದಲ್ಲಿ 100 ಎಕ್ಸ್ ಕ್ಲೂಸಿವ್ ಶೋ ರೂಂ ತೆರೆಯಲಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ.

ಕಂಪನಿ ಆರ್ಥಿಕ ಅಭಿವೃದ್ಧಿಗಾಗಿ ಕೆಲ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. ಶುದ್ಧ ಸ್ವದೇಶಿ ಜೀನ್ಸ್ ತಯಾರಾಗಲಿದೆ. ಪತಂಜಲಿ ಪ್ಯಾಕೆಟ್ ಹಾಲನ್ನು ಮಾರುಕಟ್ಟೆಗೆ ತರುವ ತಯಾರಿಯಲ್ಲಿದೆ. ಶೀಘ್ರದಲ್ಲಿಯೇ ಈ ಎಲ್ಲ ಕೆಲಸ ಶುರುವಾಗಲಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ.

ಶೋರೂಂನಲ್ಲಿ 3 ಸಾವಿರಕ್ಕೂ ಹೆಚ್ಚು ವಿನ್ಯಾಸದ ಬಟ್ಟೆಗಳಿರಲಿವೆ. ಜೀನ್ಸ್ ಬಗ್ಗೆ 2 ವರ್ಷಗಳ ಹಿಂದೆಯೇ ಬಾಲಕೃಷ್ಣ ಹೇಳಿದ್ದರು. ಇದು ಭಾರತೀಯ ಸಂಸ್ಕೃತಿಗೆ ತಕ್ಕಂತೆ ಆರಾಮದಾಯಕವಾಗಿರಲಿದೆ ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...