alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕಕ್ಕೆ 17 ಕೋಟಿ ರೂ. ಕಪ್ಪ ಕೊಟ್ಟ ‘ಬಾಹುಬಲಿ

bahi-tax

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅಭಿನಯದ ‘ಬಾಹುಬಲಿ -2’ ಯಶಸ್ವಿ ಪ್ರದರ್ಶನ ಕಂಡಿದ್ದು, ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.

ಅಂತೆಯೇ ಕರ್ನಾಟಕದಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿರುವ ‘ಬಾಹುಬಲಿ -2’ ಬರೋಬ್ಬರಿ 17 ಕೋಟಿ ರೂ. ಮನರಂಜನಾ ತೆರಿಗೆಯನ್ನು ಪಾವತಿಸಿದೆ.

ಬೆಂಗಳೂರಿನಲ್ಲಿ 13.50 ಕೋಟಿ ರೂ., ಬೆಂಗಳೂರಿನ ಹೊರಗೆ 3.50 ಕೋಟಿ ರೂ. ಮನರಂಜನಾ ತೆರಿಗೆ ಸಂಗ್ರಹವಾಗಿದೆ.

ಬೆಂಗಳೂರಿನಲ್ಲಿ 4 ದಿನಕ್ಕೆ 7.72 ಕೋಟಿ ರೂ. ತೆರಿಗೆ ಕಲೆಕ್ಷನ್ ಆಗಿದ್ದು, ಇದರಲ್ಲಿ ಮಲ್ಟಿಪ್ಲೆಕ್ಸ್ ಗಳಿಂದಲೇ 5.5 ಕೋಟಿ ರೂ. ಸಂಗ್ರಹವಾಗಿದೆ.

‘ಬಾಹುಬಲಿ’ ಮೊದಲ ಭಾಗದಿಂದ 8.9 ಕೋಟಿ ರೂ. ಮನರಂಜನಾ ತೆರಿಗೆ ಸಂಗ್ರಹವಾಗಿದ್ದರೆ, 2 ನೇ ಭಾಗದಿಂದ ಇದುವರೆಗೆ ಸುಮಾರು 17 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಇದು ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ ಸಿನಿಮಾವೊಂದರಿಂದ ಸಂಗ್ರಹವಾದ ಹೆಚ್ಚು ತೆರಿಗೆಯಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...