alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲಿ ಹಣ ಪಡೆಯುವವರಿಗೆ ಶಾಕಿಂಗ್ ನ್ಯೂಸ್…!

ಕಾನ್ಪುರ್: ಇತ್ತೀಚೆಗಂತೂ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಸ್ವಲ್ಪ ಯಾಮಾರಿದ್ರೂ ನಕಲಿ ನೋಟು ಜೇಬು ಸೇರುತ್ತವೆ. ಬ್ಯಾಂಕ್ ನಲ್ಲಿ, ಎ.ಟಿ.ಎಂ.ಗಳಲ್ಲಿಯೇ ನಕಲಿ ನೋಟು ಕಂಡು ಬಂದ ಅನೇಕ ಘಟನೆ ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ.

ಕಾನ್ಪುರ್ ನಲ್ಲಿ ಆಕ್ಸಿಸ್ ಬ್ಯಾಂಕ್ ಎ.ಟಿ.ಎಂ.ನಲ್ಲಿ ಗ್ರಾಹಕ ಸಚಿನ್ ಅವರಿಗೆ 500 ರೂ. ನಕಲಿ ನೋಟು ಬಂದಿದೆ. ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾದ ನಕಲಿ ನೋಟು ಅವರ ಕೈ ಸೇರಿದೆ.

ಆಕ್ಸಿಸ್ ಬ್ಯಾಂಕ್ ಎ.ಟಿ.ಎಂ.ನಲ್ಲಿ ಸಚಿನ್ 10,000 ರೂ. ನಗದು ಪಡೆದುಕೊಂಡಿದ್ದು, 500 ರೂ. ಮುಖಬೆಲೆಯ ನೋಟುಗಳು ಬಂದಿವೆ. ಅದರಲ್ಲಿ 1 ನಕಲಿ ನೋಟು ಕಂಡು ಬಂದಿದೆ.

ಸಚಿನ್ ಎ.ಟಿ.ಎಂ. ಸಿಬ್ಬಂದಿಗೆ ದೂರು ನೀಡಿದಾಗ, ಸೋಮವಾರ ಬದಲಿ ನೋಟು ಕೊಡುವುದಾಗಿ ಹೇಳಲಾಗಿದೆ. ಪೊಲೀಸರು ನಕಲಿ ನೋಟು ಬಂದ ಎ.ಟಿ.ಎಂ. ಮುಚ್ಚಿದ್ದಾರೆ. ಜೊತೆಗೆ ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...