alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ವಂಚನೆ ಕುರಿತು ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಎಟಿಎಂ ಬಳಕೆ ಆರಂಭಗೊಂಡ ನಂತರ ಬಹುತೇಕ ಸಾರ್ವಜನಿಕರು ಬ್ಯಾಂಕ್ ಗಳಿಗೆ ತೆರಳುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ದಿನದ 24 ಗಂಟೆಯೂ ಹಣ ದೊರೆಯುವ ಕಾರಣ ದಿನೇ ದಿನೇ ಎಟಿಎಂ ಬಳಕೆ ಹೆಚ್ಚಾಗುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡಿರುವ ವಂಚಕರು ಹಣ ಲಪಟಾಯಿಸುತ್ತಿದ್ದಾರೆ. ಇದೀಗ ಎಟಿಎಂ ಕುರಿತ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ.

ಅಮೆರಿಕದ ಎಫ್.ಬಿ.ಐ. ಈ ಕುರಿತು ಎಚ್ಚರಿಕೆಯ ಸೂಚನೆಯೊಂದನ್ನು ರವಾನಿಸಿದ್ದು, ವಿಶ್ವದಾದ್ಯಂತ ಎಟಿಎಂಗಳ ಮೇಲೆ ಬಹುದೊಡ್ಡ ಸೈಬರ್ ಅಟ್ಯಾಕ್ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಿದೆ. ವಂಚಕರು ಬ್ಯಾಂಕ್ ಗಳು ಬಂದ್ ಆಗುವ ವಾರಾಂತ್ಯದ ದಿನಗಳನ್ನು ಇದಕ್ಕೆ ಆರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಸೈಬರ್ ವಂಚಕರು ಎಟಿಎಂ ನಲ್ಲಿನ ಹಣ ಲಪಟಾಯಿಸಲು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಕ್ಷಣಾರ್ಧದಲ್ಲಿ ಎಟಿಎಂ ನಲ್ಲಿರುವ ಗ್ರಾಹಕರ ಸಂಪೂರ್ಣ ಹಣವನ್ನು ವರ್ಗಾಯಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಎಫ್.ಬಿ.ಐ. ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...