alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರು ಓದಲೇಬೇಕು ಈ ಸುದ್ದಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ಹಣ ಬೇಕೆಂದರೆ ಬ್ಯಾಂಕಿನ ಮುಂದೆ ಕ್ಯೂ ನಿಂತುಕೊಳ್ಳುವ ಪರಿಸ್ಥಿತಿ ದೂರಾಗಿ, ಅಂಗೈ ಅಗಲದ ಎಟಿಎಂ ಕಾರ್ಡ್ ಗಳು ಬಂದಿವೆ. ಎಟಿಎಂ ಕಾರ್ಡ್ ಗಳು ಕೇವಲ ಹಣ ಬಿಡಿಸಲು ಮಾತ್ರವಲ್ಲದೇ ಅನೇಕ ವಿಷಯಕ್ಕೆ ಸಹಾಯವಾಗುತ್ತದೆ. ಯಾವ್ಯಾವ ರೀತಿಯಲ್ಲಿ ಎಟಿಎಂ ಕಾರ್ಡ್ ಗಳು ಸಹಾಯವಾಗುತ್ತದೆ ಹಾಗೂ ಯಾವ ರೀತಿ ಬಳಸಬೇಕೆಂಬ ಬಗ್ಗೆ ಇಲ್ಲಿದೆ ಮಾಹಿತಿ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಯುಗದಲ್ಲಿ ಈ ಕಾರ್ಡ್ ಗಳನ್ನು ಬಳಸಿಕೊಂಡು ಕೇವಲ ಹಣ ಬಿಡಿಸುವುದು ಮಾತ್ರವಲ್ಲದೇ, ಬ್ಯಾಂಕಿನಲ್ಲಿರುವ ಬಾಕಿ ಮೊತ್ತ, ಚೆಕ್ ಬುಕ್ ಗೆ ಮನವಿ, ಹಣ ಸಂದಾಯ, ನಿಮ್ಮ ಮೊಬೈಲ್, ಕರೆಂಟ್ ಬಿಲ್ ಸೇರಿದಂತೆ ಹಲವು ಸೌಲಭ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಒಂದು ಬ್ಯಾಂಕಿನಿಂದ ಒಂದು ಬ್ಯಾಂಕಿಗೆ ಈ ಸೇವೆಯಲ್ಲಿ ಕೊಂಚ ಬದಲಾವಣೆಯಿದ್ದರೂ, ಬಹುತೇಕ ಎಲ್ಲ ಬ್ಯಾಂಕ್ ಗಳ ಕಾರ್ಡ್ ಗಳು ಒಂದೇ ರೀತಿ ಕಾರ್ಯ ನಿರ್ವಹಿಸುತ್ತವೆ.

ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವಾಗ, ಪ್ರಮುಖವಾಗಿ ಪಿನ್ ಸಂಖ್ಯೆ ಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಈ ಸಂಖ್ಯೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ಒಂದು ವೇಳೆ ಹಂಚಿಕೊಂಡರೆ, ನಿಮ್ಮ ಖಾತೆಯ ತಿಜೋರಿ ಕೀಯನ್ನು ಇನ್ನೊಬ್ಬನಿಗೆ ನೀಡಿದಂತೆಯೇ ಸರಿ. ಒಂದು ವೇಳೆ ನಿಮ್ಮ ಪಿನ್ ಕೋಡ್ ಮರೆತು ಹೋದರೆ, ಅಥವಾ ನಿಮ್ಮ ಕಾರ್ಡ್ ಕಳೆದು ಹೋದರೆ ಬ್ಯಾಂಕಿನ ಶಾಖೆಗೆ ಹೋಗಿ ಮಾಹಿತಿ ನೀಡಿ ಮೊದಲು ಬ್ಲಾಕ್ ಮಾಡಿಸಿ, ಇಲ್ಲವಾದರೆ ಖಾತೆಯಲ್ಲಿರುವ ಹಣ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ.

2009ರಿಂದ ಎಟಿಎಂ ನಿಂದ ಹಣ ಬಿಡಿಸಲು ಬ್ಯಾಂಕ್ ಗಳು ನಿಗದಿತ ಅವಕಾಶ ನೀಡಿದ್ದು, ಅದಕ್ಕಿಂತ ಹೆಚ್ಚು ಬಾರಿ ಬಿಡಿಸಿದರೆ 20 ರೂಪಾಯಿ ಜಾರ್ಜ್ ಮಾಡುತ್ತಾರೆ.

ಪ್ರಮುಖವಾಗಿ ಬಹುತೇಕ ಕಾರ್ಡ್ ದಾರರು ಅನುಭವಿಸುವ ಸಮಸ್ಯೆಯೆಂದರೆ, ಎಟಿಎಂನಿಂದ ಹಣ ಬಿಡಿಸಿದಾಗ, ಖಾತೆಯಿಂದ ಕಟ್ ಆಗಿದ್ದರೂ ಹಣ ಬರುವುದಿಲ್ಲ. ಒಂದು ವೇಳೆ ಈ ರೀತಿಯಾದರೆ ಕೂಡಲೇ ಸ್ಥಳೀಯ ಬ್ಯಾಂಕ್ ನಲ್ಲಿ ದೂರು ನೀಡಬೇಕು. 12 ದಿನದೊಳಗೆ ಹಣ ವಾಪಾಸು ಬಾರದಿದ್ದರೆ, ಪ್ರತಿನಿತ್ಯ 100 ರೂಪಾಯಿ ದಂಡವನ್ನು ಬ್ಯಾಂಕ್ ನೀಡಬೇಕೆಂಬ ನಿಯಮವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...