alex Certify
ಕನ್ನಡ ದುನಿಯಾ       Mobile App
       

Kannada Duniya

ವಾಲೆಟ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಎಸ್.ಬಿ.ಐ.

sbi-bud-ap

ನವದೆಹಲಿ: ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಅನೇಕ ಕ್ರಮ ಕೈಗೊಂಡಿವೆ.

ಮೊಬೈಲ್ ವ್ಯಾಲೆಟ್ ನಲ್ಲಿರುವ ಹಣವನ್ನು ಎ.ಟಿ.ಎಂ.ನಲ್ಲಿ ಡ್ರಾ ಮಾಡುವ ಹೊಸ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಕಲ್ಪಿಸಿದೆ.

ಎಸ್.ಬಿ.ಐ. ಮೊಬೈಲ್ ವ್ಯಾಲೆಟ್ ಗ್ರಾಹಕರಿಗೆ ಈ ಸೌಲಭ್ಯವಿದ್ದು, ಪ್ರತಿ ಬಾರಿ ಎ.ಟಿ.ಎಂ.ನಿಂದ ನಗದು ಪಡೆದಾಗ 25 ರೂ. ಶುಲ್ಕ ವಿಧಿಸಲಾಗುವುದು.

ಗ್ರಾಹಕರು ಎಸ್.ಬಿ.ಐ. ಬಡಿ(SBI Buddy) ಮೊಬೈಲ್ ವ್ಯಾಲೆಟ್ ಹೊಂದಿದ್ದಲ್ಲಿ ಅದರಲ್ಲಿರುವ ಹಣವನ್ನು ATM ನಲ್ಲಿ ಪಡೆದುಕೊಳ್ಳಬಹುದು.

ಇದರೊಂದಿಗೆ ಬಿಸಿನೆಸ್ ಕರೆಸ್ಪಾಂಡೆಂಟ್ ಮೂಲಕ ನಗದನ್ನು ಮೊಬೈಲ್ ವ್ಯಾಲೆಟ್ ಗೆ ಸೇರಿಸುವ ಅಥವಾ ಹಿಂಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. 1000 ರೂ.ವರೆಗೆ ಮೊಬೈಲ್ ವ್ಯಾಲೆಟ್ ಗೆ ಬಿಸಿನೆಸ್ ಕರೆಸ್ಪಾಂಡೆಂಟ್ ಮೂಲಕ ನಗದು ಜಮಾ ಮಾಡಬಹುದಾಗಿದ್ದು, ಇದಕ್ಕಾಗಿ ಶೇ. 0.25 ರಷ್ಟು ಸೇವಾ ಶುಲ್ಕ, ತೆರಿಗೆ ಅನ್ವಯವಾಗಲಿದೆ.

ವ್ಯಾಲೆಟ್ ನಲ್ಲಿನ ಹಣವನ್ನು 2000 ರೂ.ವರೆಗೆ ಎ.ಟಿ.ಎಂ. ಮೂಲಕ ಪಡೆಯಬಹುದಾಗಿದ್ದು, ಶೇ.2.5 ರಷ್ಟು ವಹಿವಾಟು ಶುಲ್ಕ ಪಾವತಿಸಬೇಕಿದೆ.

ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್, ಎ.ಟಿ.ಎಂ. ವ್ಯವಹಾರದ ಸೇವಾ ಶುಲ್ಕವನ್ನು 25 ರೂ. ಹೆಚ್ಚಿಸಿರುವುದನ್ನು ತಳ್ಳಿಹಾಕಿದ್ದು, ಮೊದಲಿನಂತೆಯೇ ATM ಸೇವೆಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...