alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲಿ ಸಿಕ್ತಿಲ್ಲ ಹಣ, ಗ್ರಾಹಕರು ಹೈರಾಣ

atm-ran

‘ವಾನ್ನಾಕ್ರೈ ರ್ಯಾನ್ಸಮ್ ವೇರ್’ ಕಾರಣಕ್ಕೆ ದೇಶಾದ್ಯಂತ ಹೆಚ್ಚಿನ ATM ಬಂದ್ ಆಗಿದ್ದು, ಗ್ರಾಹಕರು ಹಣ ಸಿಗದೇ ಪರದಾಡುವಂತಾಗಿದೆ.

ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅಪ್ ಡೇಟ್ ಆಗಬೇಕಿದ್ದು, ಈ ಕೆಲಸ ಪೂರ್ಣಗೊಳ್ಳುವವರೆಗೆ ಎ.ಟಿ.ಎಂ. ಬಂದ್ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್(RBI) ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದು, ಇದರಿಂದಾಗಿ ಹಣ ಸಿಗದೆ ಗ್ರಾಹಕರು ಪರದಾಡುವಂತಾಗಿದೆ.

ಅನೇಕ ಕಡೆಗಳಲ್ಲಿ ಎ.ಟಿ.ಎಂ.ಗಳಲ್ಲಿ ಹಣ ಸಿಗುತ್ತಿದೆ. ಆದರೆ, ಹೆಚ್ಚಿನ ಎ.ಟಿ.ಎಂ.ಗಳು ಬಂದ್ ಆಗಿವೆ. ಓಪನ್ ಆದ ಕೆಲ ಎ.ಟಿ.ಎಂ.ಗಳಲ್ಲಿ ಹಣ ಸಿಗುತ್ತಿಲ್ಲ.

‘ವಾನ್ನಾಕ್ರೈ ರ್ಯಾನ್ಸಮ್ ವೇರ್’ ಕಾರಣದಿಂದ ಈ ರೀತಿ ಆಗಿದೆ ಎನ್ನಲಾಗಿದ್ದರೂ, ಅನೇಕ ಕಡೆಗಳಲ್ಲಿ ನಗದು ಕೊರತೆಯಿಂದಾಗಿ ಕಳೆದ 10 ದಿನಗಳಿಂದ ಎ.ಟಿ.ಎಂ. ಬಂದ್ ಮಾಡಲಾಗಿತ್ತು. ಕ್ಯಾಶ್ ಲೆಸ್ ವ್ಯವಹಾರವನ್ನು ಉತ್ತೇಜಿಸಲು ನಗದು ಕಡಿಮೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇದರ ಬೆನ್ನಲ್ಲೇ ‘ವಾನ್ನಾಕ್ರೈ ರ್ಯಾನ್ಸಮ್ ವೇರ್’ ಉಪಟಳ ಕಾಣಿಸಿಕೊಂಡಿದೆ. ಇದೆಲ್ಲಾ ಕಾರಣಗಳಿಂದ ಹೆಚ್ಚಿನ ಎ.ಟಿ.ಎಂ.ಗಳಲ್ಲಿ ಹಣ ಸಿಗುತ್ತಿಲ್ಲ.

ಎ.ಟಿ.ಎಂ.ಗಳಲ್ಲಿ ಹಣ ಸಿಗದೇ ಗ್ರಾಹಕರು ಒಂದು ಎ.ಟಿ.ಎಂ.ನಿಂದ ಮತ್ತೊಂದು ಎ.ಟಿ.ಎಂ.ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...