alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲಿ ಬಂದ ನೋಟು ಕಂಡು ಗ್ರಾಹಕನಿಗೆ ಶಾಕ್…!

ಕಾನ್ಪುರ್: ಸಾಮಾನ್ಯವಾಗಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಕಲಿ, ಹರಿದ ನೋಟು ಬರುವುದಿಲ್ಲ. ಆದರೂ ಒಮ್ಮೊಮ್ಮೆ ಅಂತಹ ಘಟನೆಗಳು ನಡೆದಿದೆ. ಅಂತಹುದೇ ಘಟನೆಯೊಂದರ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಎ.ಟಿ.ಎಂ.ನಲ್ಲೇ ಗ್ರಾಹಕರೊಬ್ಬರಿಗೆ ಹರಿದ ಮತ್ತು ನಕಲಿ ನೋಟುಗಳು ಕಂಡು ಬಂದಿವೆ.

ಪ್ರಶಾಂತ್ ಮೌರ್ಯ ಎಂಬುವವರಿಗೆ ಹರಿದ ಮತ್ತು ನಕಲಿ ನೋಟು ಬಂದಿವೆ. ಕಾರಣಾಂತರದಿಂದ ತುರ್ತಾಗಿ ಹಣ ಪಡೆಯಲು ಎ.ಟಿ.ಎಂ.ಗೆ ಹೋಗಿ ಹಣ ಪಡೆದುಕೊಂಡೆ. ಆದರೆ, 2000 ರೂ. ಮುಖಬೆಲೆಯ 6 ಹರಿದ ನೋಟು, 1 ನಕಲಿ ನೋಟು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಎ.ಟಿ.ಎಂ. ಒಂದರಲ್ಲಿ ಚಿಲ್ಡ್ರನ್ ಬ್ಯಾಂಕ್ ಆಟಿಕೆ ನೋಟುಗಳು ಗ್ರಾಹಕರ ಕೈ ಸೇರಿದ್ದವು. ಪ್ರಶಾಂತ್ ಮೌರ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಉತ್ತರಪ್ರದೇಶ ಪೊಲೀಸರು ಎ.ಟಿ.ಎಂ. ಬಂದ್ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...