alex Certify
ಕನ್ನಡ ದುನಿಯಾ       Mobile App
       

Kannada Duniya

10 ಸಾವಿರ ಡ್ರಾ ಮಾಡಿದ ಗ್ರಾಹಕರಿಗೆ ಹೆಚ್ಚುವರಿಯಾಗಿ ಸಿಕ್ತು 30 ಸಾವಿರ

ರಾಜಸ್ತಾನದ ಎಟಿಎಂ ಒಂದರಲ್ಲಿ ಗ್ರಾಹಕರ ಅಗತ್ಯಕ್ಕಿಂತ ಹೆಚ್ಚು ಹಣ ಹೊರ ಬಂದಿರುವ ಘಟನೆ ನಡೆದಿದೆ. ಗ್ರಾಹಕರು 10 ಸಾವಿರ ರೂಪಾಯಿ ಡ್ರಾ ಮಾಡಲು ಮುಂದಾದ್ರೆ 30 ಸಾವಿರ ರೂಪಾಯಿ ಹೆಚ್ಚಿಗೆ ಬಂದಿದೆ. ಆದ್ರೆ ಗ್ರಾಹಕರ ಖಾತೆಯಿಂದ ಕೇವಲ 100 ರೂಪಾಯಿ ಮಾತ್ರ ವಜಾ ಆಗಿತ್ತು. ತಾಂತ್ರಿಕ ದೋಷದಿಂದ ಈ ಯಡವಟ್ಟು ನಡೆದಿತ್ತು.

ಚುರುವಿನ ರತನಗಡ್ ನಲ್ಲಿ ಓರಿಯೆಂಟಲ್ ಬ್ಯಾಂಕ್ ನ ಎಟಿಎಂನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಯೋಗೀಶ್ ಎಂಬಾತ 10 ಸಾವಿರ ರೂಪಾಯಿ ಡ್ರಾ ಮಾಡಿದ್ದಾನೆ. ಆದ್ರೆ 40 ಸಾವಿರ ರೂಪಾಯಿ ಎಟಿಎಂನಿಂದ ಬಂದಿದೆ. ಇನ್ನೊಬ್ಬ ವ್ಯಕ್ತಿಗೂ 30 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಸಿಕ್ಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಯೋಗೀಶ್ ಬ್ಯಾಂಕ್ ಅಧಿಕಾರಿ ಹಾಗೂ ಪೊಲೀಸರಿಗೆ ವಿಷ್ಯ ತಿಳಿಸಿದ್ದಾನೆ.

ಪರಿಶೀಲನೆ ವೇಳೆ ಎಟಿಎಂನಲ್ಲಿ ತಾಂತ್ರಿಕ ದೋಷವಿರುವುದು ಕಂಡು ಬಂದಿದೆ. ಎಟಿಎಂನಿಂದ ಮತ್ತೆ ಯಾರ್ಯಾರು ಹಣ ಡ್ರಾ ಮಾಡಿದ್ದಾರೆನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಟಿಎಂನಿಂದಾಗಿ ಬ್ಯಾಂಕ್ ಗೆ 1 ಲಕ್ಷ 50 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...