alex Certify
ಕನ್ನಡ ದುನಿಯಾ       Mobile App
       

Kannada Duniya

ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಎಸ್.ಬಿ.ಐ., ಎಚ್.ಡಿ.ಎಫ್.ಸಿ., ಪಿ.ಎನ್.ಬಿ., ಐಸಿಐಸಿಐ ಬ್ಯಾಂಕ್ ಗಳ ಎಟಿಎಂ ಮಿತಿಯಲ್ಲಿ ಕೆಲವು ಬದಲಾವಣೆಗಳಾಗಿವೆ. ನಿಮ್ಮ ಬಳಿ ಯಾವ ಮಾದರಿಯ ಕಾರ್ಡ್ ಗಳಿವೆ ಎಂಬುದರ ಮೇಲೆ ಮಿತಿ ನಿಗದಿಪಡಿಸಲಾಗಿದೆ.

ಈಗಾಗಲೇ ಎಸ್.ಬಿ.ಐ. ತನ್ನ ಗ್ರಾಹಕರಿಗೆ ದಿನವೊಂದಕ್ಕೆ ಎಟಿಎಂ ವಿಥ್ ಡ್ರಾ ಮಿತಿಯನ್ನು 40,000 ರೂಪಾಯಿಯಿಂದ 20,000 ರೂಪಾಯಿಗೆ ಇಳಿಸಿರುವ ಕುರಿತು ಮಾಹಿತಿ ನೀಡಿದೆ. ಈ ನೀತಿಯು ಎಸ್.ಬಿ.ಐ. ಕ್ಲಾಸಿಕ್ ಮತ್ತು ಮಾಸ್ಟ್ರೋ ಡೆಬಿಟ್ ಕಾರ್ಡ್ ಗೆ ಅನ್ವಯಿಸಲಿದ್ದು, ಇದು ಅ. 31 ರಿಂದು ಅನುಷ್ಠಾನಕ್ಕೆ ಬರಲಿದೆ.

ಇತರೆ ಬ್ಯಾಂಕ್ ಕಾರ್ಡ್ ಗಳ ಹಣ ವಿಥ್ ಡ್ರಾ ಮಿತಿ ವಿವರ ಇಂತಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ದಿನದ ಮಿತಿ (ರೂ.)ಪ್ರಿವಿಲೇಜ್ ಬ್ಯಾಂಕಿಂಗ್ ಟೈಟಾನಿಯಂ ಡೆಬಿಟ್ ಕಾರ್ಡ್ 1,00,000, ಸ್ಮಾರ್ಟ್ ಶಾಪರ್ ಗೋಲ್ಡ್ ಡೆಬಿಟ್ ಕಾರ್ಡ್ 75,000, ಸ್ಮಾರ್ಟ್ ಶಾಪರ್ ಸಿಲ್ವರ್ ಡೆಬಿಟ್ ಕಾರ್ಡ್ 50,000, ಎಸ್.ಬಿ.ಐ. ಬ್ಯಾಂಕ್ ನ ಪ್ಲಾಟಿನಂ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ 1,00,000, ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ 50,000, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಪ್ಲಾಟಿನಂ ಕಾರ್ಡ್ 50,000, ಕ್ಲಾಸಿಕ್ ಕಾರ್ಡ್ 25,000 ರೂ.

ಆಕ್ಸಿಸ್ ಬ್ಯಾಂಕ್ ನ ಬರ್ಗಂಡಿ ಡೆಬಿಟ್ ಕಾರ್ಡ್ 3,00,000, ಟೈಟಾನಿಯಂ ಪ್ರೈಮ್ ಇತರ ಡೆಬಿಟ್ ಕಾರ್ಡ್ 50,000, ಎಚ್.ಡಿ.ಎಫ್.ಸಿ. ಪ್ಲಾಟಿನಂ ಚಿಪ್ ಕಾರ್ಡ್ 1,00,000, ಟೈಟಾನಿಯಂ ರಾಯಲ್ ಡೆಬಿಟ್ ಕಾರ್ಡ್ 75,000, ಈಸಿ ಶಾಪ್/ರುಪೇ ಪ್ರೀಮಿಯಂ ಡೆಬಿಟ್ ಕಾರ್ಡ್ 25,000, ಈಸಿಶಾಪ್ ಟೈಟಾನಿಯಂ ಡೆಬಿಟ್ ಕಾರ್ಡ್ 50,000, ಬ್ಯಾಂಕ್ ಆಫ್ ಬರೋಡ ವೀಸಾ ಪ್ಲಾಟಿನಂ ಚಿಪ್ ಕಾರ್ಡ್ 1,00,000, ಮಾಸ್ಟರ್ ಪ್ಲಾಟಿನಮ್ ಕಾರ್ಡ್ 50,000, ರುಪೇ ಪ್ಲಾಟಿನಂ ಕಾರ್ಡ್ 50,000, ವೀಸಾ ಎಲೆಕ್ಟ್ರಾನ್ ಕಾರ್ಡ್ 25,000, ರುಪೇ ಕ್ಲಾಸಿಕ್ ಕಾರ್ಡ್ 25,000, ಮಾಸ್ಟರ್ ಕ್ಲಾಸಿಕ್ ಕಾರ್ಡ್ 25,000 ರೂ. ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...