alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್…!?

2016 ರ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ನಗದು ಕೊರತೆ ಎದುರಾಗಿತ್ತು. ಜನ ಸಾಮಾನ್ಯರು ಹಣಕ್ಕಾಗಿ ಪರದಾಡಿದ್ದರು. ಅಂತಹುದೇ ದಿನಗಳು ಈಗ ಬರತೊಡಗಿವೆ.

ಪ್ರಸ್ತುತ ಬಹುತೇಕ ಬ್ಯಾಂಕ್ ಗಳ ಎ.ಟಿ.ಎಂ. ಗಳಲ್ಲಿ ನಗದು ಕೊರತೆ ಎದುರಾಗಿದೆ. ಜನರಂತೂ ಹಣ ಪಡೆಯಲು ಎ.ಟಿ.ಎಂ.ನಿಂದ ಎ.ಟಿ.ಎಂ.ಗೆ ಅಲೆದಾಡುವಂತಾಗಿದೆ. ಎ.ಟಿ.ಎಂ. ಗಳಿಗೆ ಸಕಾಲಕ್ಕೆ ಸರಿಯಾಗಿ ನಗದು ಪೂರೈಕೆಯಾಗದ ಕಾರಣ ಹೆಚ್ಚಿನ ಕಡೆಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ.

ಗ್ರಾಹಕರು ನಗದು ಇಲ್ಲದೇ ಪರದಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಹಣದ ಹರಿವಿಗೆ ಕಡಿವಾಣ ಹಾಕಲು ಹೀಗೆ ಮಾಡಲಾಗ್ತಿದೆ. ಚುನಾವಣೆ ಕಾರಣದಿಂದಲೇ ಎ.ಟಿ.ಎಂ.ಗಳಲ್ಲಿ ಹಾಕಿದ ಹಣ ಕ್ಷಣಾರ್ಧದಲ್ಲಿ ಖಾಲಿಯಾಗ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಡಲಿರುವ ಆಯೋಗ ಇದರ ಭಾಗವಾಗಿ ನಗದು ಪಡೆಯಲು ಮಿತಿ ಹೇರುವ ಸಾಧ್ಯತೆ ಇದೆ. ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಒಬ್ಬರು ದಿನಕ್ಕೆ ಇಷ್ಟೇ ಹಣ ಪಡೆಯಬೇಕೆಂಬ ಮಿತಿ ಹೇರಲಾಗಿತ್ತು. ಅದೇ ರೀತಿ ಎಲೆಕ್ಷನ್ ಮುಗಿಯುವವರೆಗೂ ಬ್ಯಾಂಕ್, ಎ.ಟಿ.ಎಂ. ಗಳಲ್ಲಿ ನಗದು ಪಡೆಯಲು ಮಿತಿ ಹೇರಲು ಆಯೋಗ ಚಿಂತನೆ ನಡೆಸಿದೆ ಎನ್ನಲಾಗಿದೆ.

ಚುನಾವಣೆಯಲ್ಲಿ ಹಣದ ಹರಿವು ಜಾಸ್ತಿಯಾಗಲಿರುವ ಹಿನ್ನಲೆಯಲ್ಲಿ ಮೊದಲೇ ಈ ಬಗ್ಗೆ ಕಡಿವಾಣ ಹಾಕಲು ಆಯೋಗ ಯೋಜಿಸಿದ್ದು, ಬ್ಯಾಂಕ್ ಗಳೊಂದಿಗೆ ಚರ್ಚಿಸಲು ಮುಂದಾಗಿದೆ. ಹಾಗಾಗಿ ನಗದು ಪಡೆಯಲು ಮಿತಿ ಹೇರುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...