alex Certify
ಕನ್ನಡ ದುನಿಯಾ       Mobile App
       

Kannada Duniya

ತಕ್ಷಣ ಬದಲಿಸಿ ಎಟಿಎಂ ಪಿನ್

atm

ಎಟಿಎಂ ಕಾರ್ಡ್ ಹೊಂದಿದವರು ಓದಲೇಬೇಕಾದ ಸುದ್ದಿ ಇದು. ಎಟಿಎಂನಿಂದ ಹಣ ಡ್ರಾ ಮಾಡುವವರು ನೀವಾಗಿದ್ದರೆ ತಕ್ಷಣ ನಿಮ್ಮ ಪಿನ್ ಬದಲಾಯಿಸಿಕೊಳ್ಳಿ. ಯಾಕೆಂದ್ರೆ ದೇಶದಾದ್ಯಂತ ಸುಮಾರು 32 ಲಕ್ಷ ಎಟಿಎಂ ಕಾರ್ಡ್ ನ ಪಿನ್ ಕಳ್ಳತನವಾಗಿರುವ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ವರದಿಗಳ ಪ್ರಕಾರ, ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಾರ್ಡ್ ನ ಪಿನ್ ಕಳ್ಳತನವಾಗಿರುವ ಮಾಹಿತಿಯನ್ನು ಅನೇಕ ಬ್ಯಾಂಕ್ ಗಳಿಗೆ ನೀಡಿದೆಯಂತೆ. ರಿಸರ್ವ್ ಬ್ಯಾಂಕ್ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ವೀಸಾ ಹಾಗೂ ಮಾಸ್ಟರ್ ಕಾರ್ಡ್ ಗ್ರಾಹಕರಿಗಾದ ನಷ್ಟವನ್ನು ಸರಿದೂಗಿಸುವಂತೆ ನಿರ್ದೇಶನ ನೀಡಿದೆ.

ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6 ಲಕ್ಷ ಗ್ರಾಹಕರಿಗೆ ಹೊಸದಾಗಿ ಡೆಬಿಟ್ ಕಾರ್ಡ್ ನೀಡಲು ನಿರ್ಧರಿಸಿದೆ. ಜೊತೆಗೆ ಎಟಿಎಂ ಪಿನ್ ಬದಲಿಸುವಂತೆಯೂ ಸೂಚನೆ ನೀಡ್ತಾ ಇದೆ. ಪಿನ್ ನಂಬರ್ ಇಲ್ಲದೆ ನಡೆಯುವ ಅಂತರಾಷ್ಟ್ರೀಯ ವ್ಯವಹಾರಗಳಿಗೆ ನಿರ್ಬಂಧ ಹೇರಲು ಉಳಿದ ಬ್ಯಾಂಕ್ ಗಳು ಮುಂದಾಗಿವೆ.

ಎಸ್.ಬಿ.ಐ, ಹೆಷ್.ಡಿ.ಎಫ್.ಸಿ, ಐಸಿಐಸಿಐ ,ಯೆಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರ ಎಟಿಎಂ ಕಾರ್ಡ್ ಪಿನ್ ಗಳು ಕಳುವಾಗಿವೆ. ಯಾವ ಮೂಲದಿಂದ ಡಾಟಾ ಕಳುವಾಗಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಹಿಟಾಚಿ ಪೇಮೆಂಟ್ ಸರ್ವೀಸ್ ಸೇವೆಗಳ ಎಟಿಎಂನಿಂದ ಹಣ ಡ್ರಾ ಮಾಡಿದ ಗ್ರಾಹಕರ ಪಿನ್ ಕಳ್ಳತನವಾಗಿದೆ ಎಂದು ಒಂದು ಮೂಲ ಹೇಳ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...