alex Certify
ಕನ್ನಡ ದುನಿಯಾ       Mobile App
       

Kannada Duniya

100 ರೂ. ಬದಲಿಗೆ ಬಂತು 2000 ರೂ. ನೋಟ್…!

ನೋಟ್ ಬ್ಯಾನ್ ಆದಾಗ ಜನ ಎ.ಟಿ.ಎಂ. ಮುಂದೆ ಮೈಲಿಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವುದನ್ನು ನೋಡಿದ್ದೇವೆ. ಇದೇ ದೃಶ್ಯ ಪಾಟ್ನಾದ ಹನಾಬಾದ್ ನಲ್ಲಿ ಮತ್ತೊಮ್ಮೆ ಮರುಕಳಿಸಿದೆ. ಈ ಬಾರಿ ಜನ ಕ್ಯೂ ಏಕೆ ನಿಂತಿದ್ದಾರೆ ಎಂದು ತಿಳಿದ್ರೆ, ನೀವು ಸಹ ನಿಮ್ಮ ಎ.ಟಿ.ಎಂ ಕಾರ್ಡ್ ಹಿಡಿದು ಓಡೋದು ಗ್ಯಾರಂಟಿ.

ಎ.ಟಿ.ಎಂ. ನಲ್ಲಿ ಆದ ತಾಂತ್ರಿಕ ತೊಂದರೆಯಿಂದ ಹನಾಬಾದ್ ನಗರದ ಇಂಡಿಯನ್ ಬ್ಯಾಂಕ್ ನಲ್ಲಿ 100 ರೂ. ನೋಟಿನ ಬದಲಿಗೆ 2000 ರೂ. ನೋಟು ಬಂದಿವೆ. ಈ ಸುದ್ದಿ ವ್ಯಾಪಕವಾಗಿ ಹರಡಿದಾಗ, ಜನ ತಮ್ಮ ಖಾತೆಯಲ್ಲಿನ ಹಣ ಪಡೆಯಲು ಈ ಎ.ಟಿ.ಎಂ. ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸ್ಥಳೀಯ ಪತ್ರಿಕೆಯ ವರದಿಯ ಅನ್ವಯ ಎ.ಟಿ.ಎಂ ನಲ್ಲಿದ್ದ 2 ಸಾವಿರ ಮುಖ ಬೆಲೆಯ 436 ನೋಟುಗಳು ಖಾಲಿಯಾಗಿವೆ. ಅಂದ್ರೆ 872000 ರೂ. ಡ್ರಾ ಮಾಡಲಾಗಿದೆ.

ಎ.ಟಿ.ಎಂ.ನಲ್ಲಿ ಹಣ ಹಾಕುವಾಗ ಮೂರು ಬಾಕ್ಸ್ ಗಳಲ್ಲಿ ಹಾಕಲಾಗುತ್ತದೆ. 100, 500, ಹಾಗೂ 2000 ನೋಟನ್ನು ಬೇರೆ ಬೇರೆಯಾಗಿ ಹಾಕಲಾಗುತ್ತದೆ. ಹಣ ಹಾಕುವ ಅಧಿಕಾರಿ 100 ರೂ. ಬಾಕ್ಸ್ ನಲ್ಲಿ 2000 ರೂ. ಹಾಕಿ ಯಡವಟ್ಟು ಮಾಡಿದ್ದಾರೆ. ಅಧಿಕಾರಿ ಮಾಡಿದ ತಪ್ಪಿನಿಂದ ಈ ಘಟನೆ ನಡೆದಿದೆ. ಹಣ ಪಡೆದ ಗ್ರಾಹಕರ ಮಾಹಿತಿ ಇದ್ದು, ಎಲ್ಲರಿಗೂ ಹಣ ಹಿಂದಿರುಗಿಸುವಂತೆ ಸೂಚಿಸಲಾಗುವುದು ಎಂದು ಮ್ಯಾನೇಜರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...