alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಗಳಲ್ಲಿ ಸಿಗ್ತಿಲ್ಲ ಹಣ, ಪರದಾಡ್ತಿದ್ದಾರೆ ಜನ

ರಾಜ್ಯಾದ್ಯಂತ ಎ.ಟಿ.ಎಂ.ಗಳಲ್ಲಿ ಹಣದ ಕೊರತೆ ಎದುರಾಗಿದೆ. ಬಹುತೇಕ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸಿಕೊಂಡಿದ್ದು, ಜನರಂತೂ ಹಣಕ್ಕಾಗಿ ಪರದಾಡುವಂತಾಗಿದೆ.

ತಮ್ಮ ಖಾತೆಯಲ್ಲಿ ಹಣವಿದ್ದರೂ, ಜನರು ಹಣ ಪಡೆಯಲು ಹರಸಾಹಸ ನಡೆಸುವಂತಾಗಿದೆ. ಪಾಸ್ ಬುಕ್ ಹಿಡಿದು ಬ್ಯಾಂಕ್ ಗಳಿಗೆ ಎಡತಾಕುವಂತಾಗಿದೆ. ಎಲ್ಲಾ ಕಡೆ ಎ.ಟಿ.ಎಂ.ಗಳಲ್ಲಿ ಹಣದ ಕೊರತೆ ಎದುರಾಗಿದೆ. ಹೆಚ್ಚಿನ ಸಂಖ್ಯೆಯ ಎ.ಟಿ.ಎಂ.ಗಳನ್ನು ಬಂದ್ ಮಾಡಲಾಗಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕಾರಣಿಗಳು ಹಣವನ್ನು ಸಂಗ್ರಹಿಸುತ್ತಿದ್ದು, ಇದೇ ಕಾರಣಕ್ಕೆ ಎ.ಟಿ.ಎಂ.ಗಳಲ್ಲಿ ಹಣ ಸಿಗ್ತಿಲ್ಲ ಎಂಬ ಮಾತು ಕೇಳಿ ಬಂದಿವೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇದೆ. ಇದರೊಂದಿಗೆ ಚುನಾವಣಾ ಆಯೋಗ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲಿದೆ. ಈ ಕಾರಣದಿಂದ ಮೊದಲೇ ಹಣ ಸಂಗ್ರಹಿಸಲಾಗುತ್ತಿದೆ. ಹಾಗಾಗಿ ನಗದು ಕೊರತೆ ಎದುರಾಗಿದೆ.

ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ಜನ ತಮ್ಮ ಖಾತೆಯಿಂದ ಹಣ ಪಡೆಯುತ್ತಿದ್ದಾರೆ. ಹೆಚ್ಚಿನ ಜನ ಹಣ ಪಡೆದುಕೊಳ್ಳುತ್ತಿದ್ದಾರೆ ಹೊರತು ತಮ್ಮ ಖಾತೆಗಳಿಗೆ ಭರ್ತಿ ಮಾಡುತ್ತಿಲ್ಲ. ಹಾಗಾಗಿ ಹಣದ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಎ.ಟಿ.ಎಂ. ಗಳಿಗೆ ನಗದು ಕೊರತೆ ಎದುರಾಗಿದೆ. ಎಲ್ಲೆಲ್ಲೂ ಹಣಕ್ಕಾಗಿ ಪರದಾಟ ಶುರುವಾಗಿದೆ. ಚುನಾವಣೆ ಸಮೀಪಿಸುತ್ತಿರುವಂತೆ ಇನ್ನೂ ನಗದು ಕೊರತೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಎ.ಟಿ.ಎಂ. ಬಂದ್ ಆಗಿದ್ದು, ಹಲವು ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಎ.ಟಿ.ಎಂ.ಗಳಿಗೆ ಹಣ ತುಂಬಿಸಿದ ಕೆಲವೇ ಸಮಯದಲ್ಲಿ ಖಾಲಿಯಾಗ್ತಿದೆ. ಮುಂದೆ ಹಣ ಬೇಕಾದಲ್ಲಿ ನೇರವಾಗಿ ತಮ್ಮ ಖಾತೆ ಇರುವ ಬ್ಯಾಂಕ್ ಗೆ ಪಾಸ್ ಬುಕ್ ನೊಂದಿಗೆ ಹೋಗಬೇಕಾಗುತ್ತದೆ.

ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಜನಸಾಮಾನ್ಯರು ಇದೇ ರೀತಿ ಹಣಕ್ಕಾಗಿ ಪರದಾಡಿದ್ದರು. ಚುನಾವಣೆ ಕಾರಣಕ್ಕೆ ಅಂತಹುದೇ ಪರಿಸ್ಥಿತಿ ಎದುರಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...