alex Certify
ಕನ್ನಡ ದುನಿಯಾ       Mobile App
       

Kannada Duniya

ATM, ಬ್ಯಾಂಕ್ ನಲ್ಲೂ ಇಲ್ಲ ಹಣ: ಪರದಾಡ್ತಿದ್ದಾರೆ ಜನ

2016 ರ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಜನ ಹಣಕ್ಕಾಗಿ ಪರದಾಟ ನಡೆಸಿದ್ದರು. ತಮ್ಮ ಖಾತೆಯಲ್ಲಿ ಹಣವಿದ್ದರೂ, ನಗದು ಪಡೆಯಲು ಮಿತಿ ಹೇರಿದ್ದ ಕಾರಣ, ಜನ ಎ.ಟಿ.ಎಂ., ಬ್ಯಾಂಕ್, ಪೋಸ್ಟ್ ಆಫೀಸ್ ಗಳ ಬಳಿ ಕಾಯುವಂತಾಗಿತ್ತು.

ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎಫೆಕ್ಟ್ ನಿಂದಾಗಿ ಅಂತಹುದೇ ಪರಿಸ್ಥಿತಿ ಬಂದಿದೆ. ಎ.ಟಿ.ಎಂ. ಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ತುಂಬಿಸಲು ಸಾಧ್ಯವಾಗ್ತಿಲ್ಲ. ನಗದು ಕೊರತೆ ಕಾರಣದಿಂದ ಅಲ್ಪ ಪ್ರಮಾಣದ ಹಣವನ್ನು ಎ.ಟಿ.ಎಂ.ಗೆ ತುಂಬಿಸಿದ್ರೂ ಕ್ಷಣಾರ್ಧದಲ್ಲಿ ಖಾಲಿಯಾಗಿ ನೋ ಕ್ಯಾಶ್ ಬೋರ್ಡ್ ಕಾಣಿಸಿಕೊಳ್ಳುತ್ತೆ.

ಎ.ಟಿ.ಎಂ.ಗಳಲ್ಲಿ ನಗದು ಇಲ್ಲದೇ ಬ್ಯಾಂಕ್ ಗಳಿಗೆ ಹೋಗಿ ಗ್ರಾಹಕರು ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ, ವಿತ್ ಡ್ರಾ ಆದ ಹೆಚ್ಚಿನ ಪ್ರಮಾಣದ ಹಣ ವಾಪಸ್ ಬ್ಯಾಂಕ್ ಗೆ ಬರುತ್ತಿಲ್ಲ. ಚುನಾವಣೆ ಕಾರಣದಿಂದ ಹಣ ಸಂಗ್ರಹಿಸಲಾಗ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಚುನಾವಣೆ ವೆಚ್ಚಕ್ಕಾಗಿ ಹಣ ಸಂಗ್ರಹಿಸುತ್ತಿರುವುದರಿಂದ ಜನಸಾಮಾನ್ಯರು ಹಣ ಪಡೆಯಲು ಎ.ಟಿ.ಎಂ.ನಿಂದ ಎ.ಟಿ.ಎಂ.ಗೆ ಎಡತಾಕುವಂತಾಗಿದೆ. ಬ್ಯಾಂಕಿನಲ್ಲಿಯೂ ನಗದು ಕೊರತೆ ಕಂಡು ಬಂದಿದೆ. ದೊಡ್ಡ ಮೊತ್ತದ ನೋಟುಗಳಂತೂ ಕಾಣಸಿಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ಕೂಡ ನಗದು ಕೊರತೆ ಕಾರಣಕ್ಕೆ ಹೈರಾಣಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...